ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Highlights: ಜಮ್ಮು–ಕಾಶ್ಮೀರದಲ್ಲಿ Congres-NC, ಹರಿಯಾಣದಲ್ಲಿ ಬಿಜೆಪಿ ಮುನ್ನಡೆ

Published : 8 ಅಕ್ಟೋಬರ್ 2024, 2:35 IST
Last Updated : 8 ಅಕ್ಟೋಬರ್ 2024, 8:57 IST
ಫಾಲೋ ಮಾಡಿ
Comments

ಹರಿಯಾಣ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಜಮ್ಮು-ಕಾಶ್ಮೀರದಲ್ಲಿ Congress-NC ಮೈತ್ರಿಕೂಟ, ಹರಿಯಾಣದಲ್ಲಿ ಬಿಜೆಪಿ ಅಧಿಕಾರದತ್ತ ದಾಪುಗಾಲಿಟ್ಟಿದೆ.

ಜಮ್ಮು–ಕಾಶ್ಮೀರದಲ್ಲಿ Congres-Nc, ಹರಿಯಾಣದಲ್ಲಿ ಬಿಜೆಪಿ ಮುನ್ನಡೆ

ಮಧ್ಯಾಹ್ನ 2 ಗಂಟೆಯ ಎಣಿಕೆಯ ಟ್ರೆಂಡ್ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌–ಎನ್‌ಸಿ ಮೈತ್ರಿಕೂಟವು 52 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕಾರದತ್ತ ದಾಪುಗಾಲಿಟ್ಟಿದೆ. ಬಿಜೆಪಿ 27, ಜೆಕೆಪಿಸಿ 2, ಪಿಡಿಪಿ 2 ಮತ್ತು ಇತರರು 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.

ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್

ಮಧ್ಯಾಹ್ನ 2 ಗಂಟೆ ಟ್ರೆಂಡ್ ಪ್ರಕಾರ, ಹರಿಯಾಣದಲ್ಲಿ ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದು, 3ನೇ ಬಾರಿಗೆ ಅಧಿಕಾರಕ್ಕೆ ಬರುವ ಸೂಚನೆ ಸಿಕ್ಕಿದೆ. ಕಾಂಗ್ರೆಸ್ 34, ಐಎನ್‌ಎಲ್‌ಡಿ 2 ಮತ್ತು ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ವಿನೇಶ್ ಫೋಗಟ್‌ಗೆ ಮುನ್ನಡೆ

* ಮಧ್ಯಾಹ್ನ 1.30ರ ಹೊತ್ತಿಗೆ ಜುಲಾನಾ ಕ್ಷೇತ್ರದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ 4,130 ಮತಗಳಿಂದ ಮುನ್ನಡೆ ಸಾಧಿಸಿದ್ದರು.

*ಜುಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸ್ತಿಪಟು ವಿನೇಶ್ ಫೋಗಟ್ 1,237 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ. 6ನೇ ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿಯ ಯೋಗೇಶ್ ಕುಮಾರ್ 26.670 ಮತಗಳನ್ನು ಪಡೆದರೆ, ಫೋಗಟ್ 25433 ಮತ ಪಡೆದಿದ್ದರು.

ಕಾಂಗ್ರೆಸ್ ಮರಳಲಿದೆ: ಆದಿತ್ಯಾ ಸುರ್ಜೇವಾಲಾ

‘ಹರಿಯಾಣದಲ್ಲಿ ಹಲವೆಡೆ ಇಲ್ಲಿಯವರೆಗೆ ಕೇವಲ ಎರಡು ಸುತ್ತು ಎಣಿಕೆ ನಡೆದಿದೆ. ಮೂರನೇ ಸುತ್ತಿನ ಮತ ಎಣಿಕೆಯಲ್ಲಿ 2600 ಮತಗಳಿಂದ ಮುಂದಿದ್ದೇನೆ. ಎರಡು ಸುತ್ತಿನ ನಂತರವಷ್ಟೇ ಟ್ರೆಂಡ್ ಹೇಳಲಾರೆ. ಕನಿಷ್ಠ 10 ಸುತ್ತಿನ ನಂತರ ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆಯಲಿದೆ ಎಂದು ಆದಿತ್ಯ ಹೇಳಿದ್ದಾರೆ.

* ಮಧ್ಯಾಹ್ನ 12 ಗಂಟೆ ಟ್ರೆಂಡ್ ಪ್ರಕಾರ, ಹರೊಇಯಾಣದ 90 ಕ್ಷೇತ್ರಗಳ ಪೈಕಿ 50ರಲ್ಲಿ ಬಿಜೆಪಿ, 34ರಲ್ಲಿ ಕಾಂಗ್ರೆಸ್‌, 2 ಕ್ಷೇತ್ರಗಳಲ್ಲಿ ಐಎನ್‌ಎಲ್‌ಡಿ ಮತ್ತು 4 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದರು.

* ಹರಿಯಾಣದಲ್ಲಿ ಹಿನ್ನಡೆಯ ನಡುವೆಯೂ ಕಾಂಗ್ರೆಸ್ ಗೆಲುವಿನ ವಿಶ್ವಾಸದಲ್ಲಿದೆ. ನಾವು ಗೆದ್ದೇ ಗೆಲ್ಲುತ್ತೇವೆ. ಈ ಟ್ರೆಂಡ್ ಬದಲಾಗಲಿದೆ. ನಮ್ಮ ಅಭಿಪ್ರಾಯಕ್ಕೆ ಜನ ಮನ್ನಣೆ ಸಿಕ್ಕಿದೆ ಎಂದು ರಾಜ್ಯಸಭಾ ಸದಸ್ಯೆ ರೇಣುಕಾ ಚೌಧರಿ ಹೇಳಿದ್ದಾರೆ.

*ಹರಿಯಾಣದಲ್ಲಿ ಆರಂಭಿಕ ಹಿನ್ನಡೆ ಬಳಿಕ ಬಿಜೆಪಿಯು ಭಾರಿ ಮುನ್ನಡೆಯೊಂದಿಗೆ ಮುಂದುವರಿದಿದೆ. ಬೆಳಿಗ್ಗೆ 11.30 ಟ್ರೆಂಡ್ ಪ್ರಕಾರ, ಬಿಜೆಪಿ 48, ಕಾಂಗ್ರೆಸ್ 36, ಐಎನ್‌ಎಲ್‌ಡಿ 2, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಎಸ್‌ಸಿ ಮೈತ್ರಿಕೂಟ 52 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿತ್ತು. ಬಿಜೆಪಿ 26, ಪಿಡಿಪಿ 4, ಜೆಕೆಪಿಸಿ 2, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.

* ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಬಿಜೆಪಿಯ ದರ್ಶನ್ ಕುಮಾರ್‌ಗೆ ಗೆಲುವು, ಮೊದಲ ಜಯ ದಾಖಲಿಸಿದ ಬಿಜೆಪಿ

* ಬೆಳಿಗ್ಗೆ 10.30ರ ಹೊತ್ತಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಎಸ್‌ಸಿ ಮೈತ್ರಿಕೂಟ 48 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿತ್ತು. ಬಿಜೆಪಿ 26, ಪಿಡಿಪಿ 3, ಜೆಕೆಪಿಸಿ 1, ಇತರರು 12 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಹರಿಯಾಣದಲ್ಲಿ ಬಿಜೆಪಿ 49, ಕಾಂಗ್ರೆಸ್ 34, ಎನ್‌ಎಲ್‌ಡಿ 2, ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದ್ದರು.

* ಹರಿಯಾಣದ ಹಿಸಾರ್‌ನಲ್ಲಿ ಸಾವಿತ್ರಿ ಜಿಂದಾಲ್ ಮುನ್ನಡೆ

* ಜಮ್ಮು ಮತ್ತು ಕಾಶ್ಮೀರದ ಬಡಗಾಮ್ ಮತ್ತು ಗಂದೇರ್‌ವಾಲ್‌ನಲ್ಲಿ ಓಮರ್ ಅಬ್ಉಲ್ಲಾ ಮುನ್ನಡೆ

* ಬೆಳಿಗ್ಗೆ 9.30ರ ಹೊತ್ತಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಎಸ್‌ಸಿ ಮೈತ್ರಿಕೂಟ 50 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿತ್ತು. ಬಿಜೆಪಿ 28, ಪಿಡಿಪಿ 4, ಇತರರು 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.

* ಹರಿಯಾಣದ ಜುಲಾನ ಕ್ಷೇತ್ರದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ಯೋಗೇಶ್ ಭೈರಾಗಿ ಹಿನ್ನಡೆ ಅನುಭವಿಸಿದ್ದಾರೆ.

* ಶ್ರೀಗುಫ್ವಾರಾ-ಬಿಜ್‌ಬೆಹರಾದಲ್ಲಿ ಮೆಹಬೂಬಾ ಅವರ ಪುತ್ರಿ ಇಲ್ತಿಜಾ ಮುಫ್ತಿ ಹಿನ್ನಡೆ ಅನುಭವಿಸಿದ್ದಾರೆ

*ಹರಿಯಾಣದಲ್ಲಿ ಕಾಂಗ್ರೆಸ್‌–ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. 

* ಹರಿಯಾಣದಲ್ಲಿ 90 ವಿಧಾನಸಭಾ ಕ್ಷೇತ್ರಗಳಿದ್ದು, ಸರಳ ಬಹುಮತಕ್ಕೆ 46 ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ.

* ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ. ಆದರೆ, ಕಾಂಗ್ರೆಸ್‌–ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. 

* 92 ವಿಧಾನಸಭಾ ಕ್ಷೇತ್ರಗಳಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕದ ಬಳಿಕ ಚುನಾವಣೆ ನಡೆದಿದೆ. ಸರಳ ಬಹುಮತಕ್ಕೆ ಯಾವುದೇ ಪಕ್ಷ 47 ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT