ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಸಂಬಂಧ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಜ್ಜನ್ ಕುಮಾರ್, ಶರಣಾಗಲು ಒಂದು ತಿಂಗಳು ಹೆಚ್ಚುವರಿ ಕಾಲಾವಕಾಶ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಡಿಸೆಂಬರ್ 31ರೊಳಗೆ ಶರಣಾಗುವಂತೆ ಅವರಿಗೆ ನ್ಯಾಯಾಲಯ ಸೂಚಿಸಿತ್ತು.

ನ್ಯಾಯಮೂರ್ತಿಗಳಾದ ಎಸ್.ಮುರಳೀಧರ್ ಮತ್ತು ವಿನೋದ್ ಗೋಯಲ್ ಅವರನ್ನು ಒಳಗೊಂಡ ಪೀಠ, ‘ಶರಣಾಗತಿಗೆ ವಿನಾಯಿತಿ ನೀಡಲು ಸೂಕ್ತ ಆಧಾರಗಳಿಲ್ಲ’ ಎಂದು ಹೇಳಿದೆ.

ಇದೇ ಪೀಠ, 73 ವರ್ಷದ ಸಜ್ಜನ್ ಅವರಿಗೆ ಇದೇ 17ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಸ್ತಿ ಮತ್ತು ಮಕ್ಕಳಿಗೆ ಸಂಬಂಧಿಸಿದ ಕೌಟುಂಬಿಕ ವ್ಯವಹಾರವನ್ನು ಇತ್ಯರ್ಥಪಡಿಸಬೇಕಿದೆ, ಅಲ್ಲದೆ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಮಯಾವಕಾಶ ಬೇಕಿದೆ ಎಂದು ಸಜ್ಜನ್ ಕಾರಣ ನೀಡಿದ್ದರು.

ಜೀವಾವಧಿ ಶಿಕ್ಷೆ ಆದೇಶ ಬಂದಾಗಿನಿಂದ ತಮ್ಮ ಕಕ್ಷಿದಾರರು ಆಘಾತಕ್ಕೆ ಒಳಗಾಗಿದ್ದಾರೆ ಮತ್ತು ಅವರು ತಾನು ಮುಗ್ಧ ಎಂದೇ ಭಾವಿಸಿದ್ದಾರೆ ಎಂದು ಸಜ್ಜನ್ ಪರ ವಕೀಲ ಅನಿಲ್ ಶರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.