ತಿರುವನಂತಪುರ: ಕೇರಳದಲ್ಲಿ ಮತ್ತೆ ಮಳೆ ಅಬ್ಬರ ಮುಂದುವರಿದಿದ್ದು ಬುಧವಾರ ಬೆಳಿಗ್ಗೆ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ ಮಳೆಯಾಗಿದೆ. ಪರಿಣಾಮ ಹಲವು ಭಾಗಗಳಲ್ಲಿ ಆಸ್ತಿ ಹಾನಿ, ಸಂಚಾರ ದಟ್ಟಣೆ, ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನಡೆದಿದೆ.

ಮುಂಜಾನೆ ವೇಳೆ ಇಡುಕ್ಕಿ, ಎರ್ನಾಕುಲಂ, ತ್ರಿಶೂರ್ ಜಿಲ್ಲೆಗಳಲ್ಲಿ ಗಂಟೆಗೆ 50 ಕಿ. ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಾಮಾನ್ಯದಿಂದ ಭಾರಿ ಪ್ರಮಾಣದ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೊಟ್ಟಯಂ– ಆಳಪ್ಪುಳ ಮಾರ್ಗದಲ್ಲಿ ಹಲವು ಮರಗಳು ಹಳಿಗಳ ಮೇಲೆ ಬಿದ್ದಿದ್ದು ರೈಲು ಸಂಚಾರ ಸ್ಥಗಿತಗೊಂಡಿದೆ.

ಪ್ರಮುಖ ಮಾರ್ಗಗಳಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ. ಜತೆಗೆ ರಸ್ತೆಗಳು ಜಲಾವೃತವಾಗುವ ಸಾಧ್ಯತೆ ಇರುವ ಕಾರಣ ಸಂಚಾರ ಮಾಡುವಾಗ ಎಚ್ಚರಿಕೆವಹಿಸಬೇಕೆಂದು ರಾಜ್ಯ ವಿಪತ್ತು ನಿರ್ವಹಣಾ ವಿಭಾಗ ಮುನ್ಸೂಚನೆ ನೀಡಿದೆ.

ಮಂಗಳವಾರ 6 ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಉಳಿದ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.