ಶ್ರೀನಗರ:ಇಸ್ಲಾಂ ಧಾರ್ಮಿಕ ಆಚರಣೆ ರಂಜಾನ್ 17ನೇ ದಿನವಾದ ಇಂದು ಉಗ್ರರು ಆತ್ಮಾಹುತಿ ಬಾಂಬ್ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಎಚ್ಚರಿಕೆ ನೀಡಿದೆ. ಹೀಗಾಗಿಕಾಶ್ಮೀರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಕ್ರಿ.ಶ 7 ನೇ ಶತಮಾನದಲ್ಲಿ ಪ್ರವಾದಿ ಮೊಹಮದ್ ಮತ್ತು ಆತನ 300 ಸಹಚರರು ರಂಜಾನ್ ಆಚರಣೆಯ 17ನೇ ದಿನದಂದುಅರಬ್ನಬುಡಕಟ್ಟು ಸಮುದಾಯದವಿರುದ್ಧ ಬರ್ದ್ ಕದನದಲ್ಲಿ ಜಯ ಸಾಧಿಸಿದ್ದರು. ಇಸ್ಲಾಂ ಧರ್ಮ ಆರಂಭದ ದಿನಗಳಲ್ಲಿ ದೊರೆತ ದೊಡ್ಡ ಜಯ ಇದು ಎಂದು ಇತಿಹಾಸದಲ್ಲಿ ದಾಖಲಾಗಿದೆ.ಕಾಕತಾಳೀಯ ಎಂಬಂತೆ ಮೇ 11 ರಂಜಾನ್ ಆಚರಣೆಯ 17ನೇ ದಿನವಾಗಿದೆ.

ಕಣಿವೆ ರಾಜ್ಯದಲ್ಲಿ ಉಗ್ರರುರಂಜಾನ್ ಆಚರಣೆಯ 17ನೇ ದಿನದಂದು ಸೇನಾ ಪಡೆ ಹಾಗೂ ಶಿಬಿರಗಳ ಮೇಲೆ ಈ ಹಿಂದೆಯೂದಾಳಿ ನಡೆಸಿದ್ದಾರೆ. ಹೀಗಾಗಿ ಕಟ್ಟೆಚ್ಚರ ವಹಿಸಲಾಗಿದೆ.

‘ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್, ಭದ್ರತಾ ಪಡೆಗಳನ್ನು ಗುರಿಯಾಗಿರಿಸಿ ಸೋಮವಾರ ದಾಳಿ ನಡೆಸಬಹುದು ಎಂದುತಿಳಿದು ಬಂದಿದೆ. ಉಗ್ರರು ಕಾರ್ ಬಾಂಬ್ ಅಥವಾ ಆತ್ಮಾಹುತಿ ಬಾಂಬರ್ಗಳನ್ನು ಬಳಸಿಕೊಂಡು ದಾಳಿ ನಡೆಸುವ ಸಾಧ್ಯತೆಗಳಿವೆ’ ಎಂದು ಎಚ್ಚರಿಸಲಾಗಿದೆ.

ಕಳೆದ ಬುಧವಾರ ಹತ್ಯೆಯಾದ ಹಿಜ್ಬುಲ್–ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥರಿಯಾಜ್ ನೈಕೂ ಹತ್ಯೆಗೆ ಪ್ರತೀಕಾರವಾಗಿ ಉಗ್ರರು ದೊಡ್ಡ ಸಂಚು ನಡೆಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಆತ್ಮಾಹುತಿ ದಾಳಿ ಎಚ್ಚರಿಕೆಯನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಲಷ್ಕರ್-ಎ-ತಯಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರರು ಕಾಶ್ಮೀರದಲ್ಲಿ ಇಂತಹ ದಾಳಿಗಳನ್ನು ನಡೆಸಬಲ್ಲರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದುವೇಳೆ ಉಗ್ರರು ಮೇ 11 ರಂದು ದಾಳಿ ನಡೆಸಲು ಸಾಧ್ಯವಾಗದಿದ್ದರೂ ಭೀತಿ ಇದ್ದೇ ಇರುತ್ತದೆ. ಹಾಗಾಗಿ ನಾವು ಸದಾ ಎಚ್ಚರದಿಂದ ಇರಲಿದ್ದೇವೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.