ಆಗ್ರಾ: ಹಿಂದುಗಳ ಪವಿತ್ರ ಗ್ರಂಥ ರಾಮಚರಿತಮಾನಸವನ್ನು ಅವಮಾನಿಸಿರುವ ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಸ್ವಾಮಿ ಪ್ರಸಾದ್ ಮೌರ್ಯ ನಾಲಿಗೆ ಕತ್ತರಿಸಿದವರಿಗೆ ₹ 51,000 ಬಹುಮಾನ ನೀಡುತ್ತೇವೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಘೋಷಿಸಿದೆ.

ಉತ್ತರ ಪ್ರದೇಶದ ಹಿಂದುಳಿದ ವರ್ಗದ ಪ್ರಮುಖ ನಾಯಕರಾಗಿರುವ ಮೌರ್ಯ, ಹಿಂದುಗಳ ಪವಿತ್ರ ಕೃತಿ ರಾಮಚರಿತಮಾನಸದ ಕೆಲವು ಭಾಗಗಳು ಜಾತಿಯ ಆಧಾರದ ಮೇಲೆ ಸಮಾಜದ ದೊಡ್ಡ ವರ್ಗವನ್ನು ಅವಮಾನಿಸುತ್ತದೆ ಮತ್ತು ಕೃತಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು.

ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಹಾಸಭಾದ ಜಿಲ್ಲಾ ಉಸ್ತುವಾರಿ ಸೌರಭ್ ಶರ್ಮಾ, ಯಾವುದೇ ಧೈರ್ಯವಂತ ವ್ಯಕ್ತಿ ಸಮಾಜವಾದಿ ನಾಯಕ ಪ್ರಸಾದ್ ಮೌರ್ಯ ಅವರ ನಾಲಿಗೆ ಕತ್ತರಿಸಿದರೆ, ಅವರಿಗೆ ₹51,000 ಚೆಕ್ ನೀಡಲಾಗುವುದು. ಅವರು ನಮ್ಮ ಧಾರ್ಮಿಕ ಗ್ರಂಥವನ್ನು ಅವಮಾನಿಸಿದ್ದಾರೆ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದರು.

ಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯರು ಮೌರ್ಯ ಅವರ ಹೇಳಿಕೆಯನ್ನು ಖಂಡಿಸಿ ಸಾಂಕೇತಿಕ ಮೆರವಣಿಗೆ ನಡೆಸಿದರು. ಜತೆಗೆ ಪ್ರತಿಕೃತಿಯನ್ನು ಸುಟ್ಟು ಯಮುನಾ ನದಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಪಿಟಿಐ ಜೊತೆ ಮಾತನಾಡಿದ ಮಹಾಸಭಾದ ರಾಷ್ಟ್ರೀಯ ವಕ್ತಾರ ಸಂಜಯ್ ಜಾಟ್, ಸ್ವಾಮಿ ಪ್ರಸಾದ್ ಮೌರ್ಯ ಅವಹೇಳನಕಾರಿ ಹೇಳಿಕೆಯನ್ನು ನಾವು ವಿರೋಧಿಸುತ್ತೇವೆ. ಮಾಜಿ ಕ್ಯಾಬಿನೆಟ್ ಸಚಿವರಾಗಿರುವ ಮೌರ್ಯ ಬಿಎಸ್ಪಿಯಲ್ಲಿದ್ದಾಗ 'ಜೈ ಭೀಮ್, ಜೈ ಭಾರತ್' ಎಂದು ಹೇಳುತ್ತಿದ್ದರು. ಬಿಜೆಪಿಗೆ ಸೇರಿದಾಗ ರಾಮಚರಿತಮಾನಸವನ್ನು ಗೌರವಿಸಲು ಪ್ರಾರಂಭಿಸಿದರು ಮತ್ತು ಈಗ ಅವರು ಸಮಾಜವಾದಿ ಪಕ್ಷಕ್ಕೆ ಸೇರಿದ್ದರಿಂದ ಪವಿತ್ರ ಗ್ರಂಥಕ್ಕೆ ಅವಮಾನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.