ಅಹಮದಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹಂತಕ ನಾಥೂರಾಮ್ ಗೋಡ್ಸೆಯನ್ನು ಗಲ್ಲಿಗೇರಿಸಿದ ದಿನದಂದು (ನವೆಂಬರ್ 15) ಅವರ ಪ್ರತಿಮೆ ಸ್ಥಾಪಿಸುವುದಾಗಿ ಗುಜರಾತ್ ಮೂಲದ ಹಿಂದೂ ಸಂಘಟನೆಯಾದ ಹಿಂದೂ ಸೇನಾ ಹೇಳಿಕೆ ನೀಡಿದೆ.

ಹಿಂದೂ ಸೇನಾ ಸಂಘಟನೆಯ ಅಧ್ಯಕ್ಷ ಪ್ರತೀಕ್ ಭಟ್ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ:ಮಹಾರಾಷ್ಟ್ರ:ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು; ಐವರು ಮಹಿಳೆಯರ ರಕ್ಷಣೆ

ಯುವಕರ ಹೃದಯದಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ತುಂಬುವ ನಿಟ್ಟಿನಲ್ಲಿ ಪ್ರತಿಮೆಯನ್ನು ಸೌರಾಷ್ಟ್ರದ ಜಾಮನಗರದಲ್ಲಿ ಸ್ಥಾಪಿಸಲಾಗುವುದು ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ದ್ವಾರಾಕಾದೀಶ ಮಂದಿರದಲ್ಲಿ ನಡೆಸಲಾದ ಸಭೆಯಲ್ಲಿ ಗೋಡ್ಸೆ ಪ್ರತಿಮೆ ಸ್ಥಾಪಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ 30 ಸದಸ್ಯರ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು.

'ನಮ್ಮ ಯುವಕರಿಗೆ ದೇಶಭಕ್ತಿಯ ಕುರಿತು ಸಂದೇಶ ನೀಡಲು ನಾವು ಜಾಮನಗರದಲ್ಲಿ 'ಮಹಾತ್ಮ ಗೋಡ್ಸೆ' ಪ್ರತಿಮೆಯನ್ನು ಸ್ಥಾಪಿಸುವುದಕ್ಕಾಗಿ ಸಭೆ ನಡೆಸಿದ್ದೇವೆ. ಇಂದಿನ ಯುವಕರಲ್ಲಿ ಸಾಕಷ್ಟು ಚೈತನ್ಯವಿದೆ. ಆದರೆ ರಾಷ್ಟ್ರ ನಿರ್ಮಾಣದಲ್ಲಿ ಈ ಬಲವನ್ನು ಚಲಾಯಿಸುವ ಮಾರ್ಗದರ್ಶಕ ವ್ಯಕ್ತಿಗಳಿಲ್ಲ. ಗೋಡ್ಸೆ ಅವರ ಬದುಕಿನ ಬಗ್ಗೆ ಸಾಕಷ್ಟು ಋಣಾತ್ಮಕ ಮಾಹಿತಿಗಳು ತೇಲಾಡುತ್ತಿದೆ. ಆದ್ದರಿಂದ ಅವರ ನೆನಪಿನಲ್ಲಿ ನಾವು ಪ್ರತಿಮೆಯನ್ನು ಜಾಮನಗರದಲ್ಲಿ ಸ್ಥಾಪಿಸಲು ನಿರ್ಧರಿಸಿದ್ದೇವೆ' ಎಂದು ಪ್ರತಿಕ್ ಭಟ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.