ಕೋಲ್ಕತ್ತ: ನೆರೆಯ ಬಾಂಗ್ಲಾದೆಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಹಲವೆಡೆ ಹಿಂದೂಗಳ ಹತ್ಯೆ ನಡೆಯುತ್ತಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ 1 ಕೋಟಿಗೂ ಅಧಿಕ ನಿರಾಶ್ರಿತರು ಪಶ್ಚಿಮ ಬಂಗಾಳಕ್ಕೆ ಶೀಘ್ರ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ನಿರಾಶ್ರಿರಾಗಿ ಬರುವ ಬಂಗ್ಲಾದ ಹಿಂದೂಗಳಿಗೆ ಸಿಎಎ ಅಡಿ ಭಾರತದ ಪೌರತ್ವ ನೀಡಬೇಕು ಎಂದು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಒತ್ತಾಯಿಸಿದ್ದಾರೆ.

ಹಸೀನಾ ರಾಜೀನಾಮೆಗೆ ಒತ್ತಾಯಿಸಿ ನಿನ್ನೆಯಿಂದ ಆರಂಭವಾಗಿದ್ದ ಅಸಹಕಾರ ಚಳವಳಿ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಮತ್ತು ಅವಾಮಿ ಲೀಗ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ 106ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

‘ಬಾಂಗ್ಲಾದದೇಶದಲ್ಲಿ ಹಿಂದೂಗಳ ಹತ್ಯೆ ಮಾಡಲಾಗುತ್ತಿದೆ. ಕೆಲ ದಿನಗಳಲ್ಲಿ ಅಲ್ಲಿನ ಪರಿಸ್ಥಿತಿ ತಹಬದಿಗೆ ಬರದಿದ್ದರೆ, 1947 ಅಥವಾ 1971ರ ಲಿಬರೇಶನ್ ಯುದ್ಧದ ಸಂದರ್ಭದಲ್ಲಾದಂತೆ ಬಾಂಗ್ಲಾದಿಂದ ಬರಲಿರುವ 1 ಕೊಟಿಗೂ ಅಧಿಕ ನಿರಾಶ್ರಿತರನ್ನು ಸೇರಿಸಿಕೊಳ್ಳಲು ಪಶ್ಚಿಮ ಬಂಗಾಳ ಸಿದ್ಧವಾಗಬೇಕಿದೆ’ಎಂದಿದ್ದಾರೆ.

ಈ ಕುರಿತಂತೆ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕೂಡಲೇ ಕೇಂದ್ರ ಸರ್ಕಾರದ ಜೊತೆ ಚರ್ಚಿಸಬೇಕಿದೆ ಎಂದಿದ್ದಾರೆ.
.ಭಾರತದ ಮೂಲಕ ಲಂಡನ್ನತ್ತ ಹಸೀನಾ: ದೆಹಲಿ ಸಮೀಪ ಬಾಂಗ್ಲಾ ಪ್ರಧಾನಿ ವಿಮಾನ ಲ್ಯಾಂಡ್.ಶೇಖ್ ಹಸೀನಾ ರಾಜಕೀಯಕ್ಕೆ ಮರಳುವುದಿಲ್ಲ: ಮಗ ಸಜೀದ್ ಜಾಯ್ .ರಾಜೀನಾಮೆ ಬಳಿಕ ಹಸೀನಾ ಪಲಾಯನ, ದೇಶ ಮುನ್ನಡೆಸಲು ಮಧ್ಯಂತರ ಸರ್ಕಾರ: ಬಾಂಗ್ಲಾ ಸೇನೆ.PHOTOS | ಬಾಂಗ್ಲಾದಲ್ಲಿ ಅರಾಜಕತೆ; ಪ್ರತಿಭಟನೆಯ ಕಾವು: ಪ್ರಧಾನಿ ಹಸೀನಾ ರಾಜೀನಾಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.