ರಿಷಿಕೇಶ್, (ಉತ್ತರಾಖಂಡ): ಅಪರೂಪದ ಹಾಗೂ ಅಳಿವಿನಂಚಿನ ಪ್ರಾಣಿ ಎಂದು ಗುರುತಿಸಲಾದ ಹಾಗ್ ಜಿಂಕೆ ಉತ್ತರಾಖಂಡದ ರಾಜಾಜಿ ಹುಲಿ ಸಂರಕ್ಷಿತಾರಣ್ಯದಲ್ಲಿ ಈಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಂಡು ಬಂದಿದೆ.

ಜೀವವೈವಿಧ್ಯತೆ ಅಧ್ಯಯನಕ್ಕಾಗಿ ಈಚೆಗೆ ಕಾಡಿನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಚಿಲ್ಲಾ ವಲಯದಲ್ಲಿ ಅಪರೂಪದ ಜಿಂಕೆ ಇರುವಿಕೆ ಪತ್ತೆಯಾಗಿದೆ ಎಂದು ಸಂರಕ್ಷಿತಾರಣ್ಯದ ನಿರ್ದೇಶಕ ಸಾಕೇತ್ ಬಡೋಲಾ ತಿಳಿಸಿದ್ದಾರೆ.

ಇಂತಹ ಅಪರೂಪದ ಪ್ರಾಣಿ ಇಲ್ಲಿ ಕಂಡು ಬರಲು ಅರಣ್ಯ ಹಾಗೂ ಜೀವವೈವಿಧ್ಯತೆ ಸಂರಕ್ಷಣಗೆ ನಾವು ಕೈಗೊಂಡಿರುವ ಸಾಕಷ್ಟು ಕ್ರಮಗಳೇ ಕಾರಣ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಅರಣ್ಯದ ಹಲವೆಡೆ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಜೀವವೈವಿಧ್ಯತೆ ಹೆಚ್ಚುತ್ತಿರುವುದನ್ನು ಈ ಮೂಲಕ ನಾವು ಕಂಡುಕೊಂಡಿದ್ದೇವೆ. ಹಾಗ್ ಜಿಂಕೆ ನಮ್ಮ ಕಾಡಿನಲ್ಲಿ ಕಂಡು ಬಂದಿರುವುದು ಹೊಸ ವರ್ಷಕ್ಕೆ ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ. ವನ್ಯಲೋಕ ಪ್ರಿಯರಿಗೆ ಇದೊಂದು ಉಡುಗೊರೆ ಎಂದು ಅವರು ಹೇಳಿದ್ದಾರೆ.

ರಾಜಾಜಿ ಕಾಡಿನಲ್ಲಿ ಸೂಕ್ತವಾದ ಆವಾಸಸ್ಥಾನವನ್ನು ಕಂಡುಕೊಂಡಿರುವುದಕ್ಕೆ ಹಾಗ್ ಜಿಂಕೆ ಹತ್ತಿರದ ಅರಣ್ಯದಿಂದ ಸ್ಥಳಾಂತರಗೊಂಡಿರಬಹುದು. ಇತ್ತೀಚಿನ ದಿನಗಳಲ್ಲಿ ಹಾಗ್ ಜಿಂಕೆಗಳು ಕಂಡು ಬರುವುದೇ ಅಪರೂಪ ಎಂದು ಅವರು ಮಾಹಿತಿ ನೀಡಿದ್ದಾರೆ.

ಭೂತಾನ್, ನೇಪಾಳ, ಪಾಕಿಸ್ತಾನ ಹಾಗೂ ಭಾರತದ ಉತ್ತರ, ವಾಯವ್ಯ ಭಾಗದ ಪರ್ವತಾರಣ್ಯಗಳು ಹಾಗ್ ಜಿಂಕೆಗಳ ನೈಸರ್ಗಿಕ ಆವಾಸಸ್ಥಾನವಾಗಿವೆ. ಇದಕ್ಕೆ ಸಾಮಾನ್ಯವಾಗಿ ಆಡುಭಾಷೆಯಲ್ಲಿ ಹಂದಿ ಜಿಂಕೆ ಎಂದೂ ಹೇಳುವುದುಂಟು.
.ಶಿಮ್ಲಾ: ಪೊಲೀಸರ ಈ ಕ್ರಮದಿಂದ ಸೇಬು ತುಂಬಿದ ವಾಹನಗಳ ಕಳ್ಳತನ ಗಮನಾರ್ಹ ಇಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.