ಕಾಸರಗೋಡು: ಕುವೈತ್ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 40 ಭಾರತೀಯರು ಮೃತಪಟ್ಟಿದ್ದಾರೆ. ಆದರೆ ಈ ಅವಘಡದ ನಡುವೆಯೇ ಕೇರಳದ ನಳಿನಾಕ್ಷನ್ ಎಂಬುವವರು ತೋರಿದ ಧೈರ್ಯವು ಇಂದು ಅವರು ಬದುಕುಳಿಯುವುದಕ್ಕೆ ಕಾರಣವಾಗಿದೆ.
.T20 WC | ದಶಕದ ಬಳಿಕ ರೋಹಿತ್, ಸೂರ್ಯ ಭೇಟಿ; 'ತುಂಬಾ ವಿಶೇಷ' ಎಂದ ನೇತ್ರವಾಲ್ಕರ್.ಪೋಕ್ಸೊ ಪ್ರಕರಣ: BSY ವಿರುದ್ಧ ಬಂಧನ ವಾರೆಂಟ್ ಹೊರಡಿಸಲು ನ್ಯಾಯಾಲಯದ ಆದೇಶ.
ಈ ಅವಘಡ ಸಂಭವಿಸಿದಾಗ ಕಟ್ಟಡದ ಮೂರನೇ ಮಹಡಿದಲ್ಲಿ ಸಿಲುಕಿಕೊಂಡಿದ್ದ ನಳಿನಾಕ್ಷನ್, ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲಿಯೇ ಇದ್ದ ನೀರಿನ ಟ್ಯಾಂಕ್ಗೆ ಜಿಗಿದಿದ್ದಾರೆ. ಈ ವೇಳೆ ಮತ್ತೊಂದು ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ ನಳಿನಾಕ್ಷನ್ ಸಂಬಂಧಿಕರು ಈತ ಜಿಗಿದಿದ್ದನ್ನು ಗಮನಿಸಿ, ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

‘ಈ ಕ್ಷಣದಲ್ಲಿ ನಾನು ತೆಗೆದುಕೊಂಡ ಧೈರ್ಯದ ನಿರ್ಧಾರದಿಂದಾಗಿ ನಾನು ಇಂದು ಜೀವಂತವಾಗಿದ್ದೇನೆ ಎಂದು ನಳಿನಾಕ್ಷನ್ ತಿಳಿಸಿದ್ದಾರೆ.‘
.ಸಿಕ್ಕಿಂನಲ್ಲಿ ಭೂಕುಸಿತ: ಒಬ್ಬ ಸಾವು, ಐವರು ನಾಪತ್ತೆ.ರಾಜ್ಯಸಭಾ ಚುನಾವಣೆ: NCP ಅಭ್ಯರ್ಥಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ನಾಮಪತ್ರ.
ನೀರಿನ ತೊಟ್ಟಿಗೆ ಜಿಗಿದಿದ್ದ ನಳಿನಾಕ್ಷನ್ ಬಾಯಿಯಿಂದ ರಕ್ತ ಸುರಿಯುತ್ತಿತ್ತು, ತಕ್ಷಣವೇ ಅವರನ್ನು ಹತ್ತಿರದ ತುರ್ತು ಚಿಕಿತ್ಸಾ ಘಟಕಕ್ಕೆ ಸಂಬಂಧಿಕರು ದಾಖಲಿಸಿದ್ದಾರೆ ಇದರಿಂದ ಜೀವ ಉಳಿದಿದೆ ಎಂದು ನಳಿನಾಕ್ಷನ್ ಚಿಕ್ಕಪ್ಪ ಬಾಲಕೃಷ್ಣನ್ ಇಲ್ಲಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕಾರಣದಿಂದಾಗಿ ನಳಿನಾಕ್ಷನ್ ಕುಟುಂಬದೊಂದಿಗೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ. ಆದರೆ ಆಸ್ಪತ್ರೆಯಲ್ಲಿ ಸುಧಾರಿಸಿಕೊಳ್ಳುತ್ತಿದ್ದಾರೆ, ಯಾವುದೇ ತೊಂದರೆ ಇಲ್ಲ ಎಂದು ಬಾಲಕೃಷ್ಣನ್ ಹೇಳಿದ್ದಾರೆ.
.All Eyes On Vaishno Devi: ಭಾರತದಲ್ಲಿ ಉಗ್ರರ ದಾಳಿ ಖಂಡಿಸಿದ ಪಾಕ್ ಕ್ರಿಕೆಟಿಗ.ಕುವೈತ್ ಅಗ್ನಿ ದುರಂತದಲ್ಲಿ ರಾಜ್ಯದ ಐವರು ಸಾವು: ತಮಿಳುನಾಡು ಸರ್ಕಾರ .
ಕುವೈತ್ನ ಕಟ್ಟಡವೊಂದರಲ್ಲಿ ಬುಧವಾರ ನಡೆದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಭಾರತೀಯರು ಸೇರಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕುವೈತ್ನ ದಕ್ಷಿಣದಲ್ಲಿರುವ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್ ಪ್ರದೇಶದ ಆರು ಮಹಡಿಗಳ ಕಟ್ಟಡವೊಂದರ ಅಡುಗೆ ಮನೆಯಲ್ಲಿ ಬುಧವಾರ ಬೆಳಿಗ್ಗೆ ಹೊತ್ತಿಕೊಂಡ ಬೆಂಕಿಯು ಈ ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಟ್ಟಡದಲ್ಲಿ ಒಂದೇ ಕಂಪನಿಯ 160 ಮಂದಿ ಕೆಲಸಗಾರರು ವಾಸಿಸುತ್ತಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.