ನವದೆಹಲಿ:ಮುಂದಿನ ಜುಲೈನಿಂದ ದೇಶದಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣ ಪತ್ರಗಳನ್ನು(ಆರ್ಸಿ) ವಿತರಿಸಲುರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ.

‘ಸ್ಮಾರ್ಟ್’ ಡಿಎಲ್ ಮತ್ತು ಆರ್ಸಿಗಳ ಬಣ್ಣ, ವಿನ್ಯಾಸ ಹಾಗೂ ಭದ್ರತಾ ಲಕ್ಷಣಗಳು ಒಂದೇ ರೀತಿ ಇರಲಿವೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ಸ್ಮಾರ್ಟ್ ಕಾರ್ಡ್ಗಳಲ್ಲಿ ಮೈಕ್ರೋ ಚಿಪ್ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆಯೂ ಇರಲಿದೆ. ಇದು ನಿಯರ್ ಫೀಲ್ಡ್ ಕಮ್ಯೂನಿಕೇಶನ್ (NFC/near-field communication) ಲಕ್ಷಣವನ್ನೂ ಒಳಗೊಳ್ಳಲಿದ್ದು, ಇದನ್ನು ಮೆಟ್ರೊಹಾಗೂ ಎಟಿಎಮ್ ಕಾರ್ಡ್ಗಳ ರೀತಿಯಲ್ಲಿ ಬಳಸಬಹುದು. ಈ ಮೂಲಕ ಸಂಚಾರ ಪೊಲೀಸರು ಸ್ಕ್ಯಾನ್ ಮಾಡಿ ಸುಲಭವಾಗಿ ಮಾಹಿತಿಯನ್ನು ಕಲೆಹಾಕಬಹುದು.

ವಾಹನ ಚಾಲಕರ ಅಂಗಾಂಗ ದಾನದ ಮಾಹಿತಿಯನ್ನೂ ಈ ಹೊಸ ಡಿಎಲ್ ನೀಡಲಿದೆ. ಅಂಗವಿಕಲರಿಗಾಗಿ ಸಿದ್ಧಪಡಿಸಿರುವ ವಿಶೇಷ ವಾಹನಗಳ ಬಗ್ಗೆಯೂ ವಿವರ ನೀಡಲಿದೆ. ಆರ್ಸಿ ಮೂಲಕ ವಾಹನದ ಹೊಗೆ ಹೊರಸೂಸುವಿಕೆ ಪ್ರಮಾಣವನ್ನೂತಿಳಿಯಬಹುದಾಗಿದ್ದು, ವಾಯುಮಾಲಿನ್ಯ ನಿಯಂತ್ರಣಕ್ಕೂ ಇದು ನೆರವಾಗಲಿದೆ ಎಂದು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

ಪ್ರತಿದಿನ ಹೊಸತು ಮತ್ತು ಪರಿಷ್ಕೃತ32,000ಡಿಎಲ್ಗಳನ್ನು ನೀಡಲಾಗುವುದು. 43,000ದಷ್ಟು ನೋಂದಣಿ,ಮರು ನೋಂದಣಿ ಮಾಡಲಾಗುವುದು. ಡಿಎಲ್ ಹಾಗೂ ಆರ್ಸಿಗಳ ನವೀಕರಣಕ್ಕೆ ತೆರಳಿದವರಿಗೆ ಹೊಸ ಕಾರ್ಡ್ಗಳನ್ನು ವಿತರಿಸಲಾಗುತ್ತದೆ. ಈ ಸಂಬಂಧ ರಸ್ತೆ ಸಾರಿಗೆ ಸಚಿವಾಲಯ ಈಗಾಗಲೇಪ್ರಕ್ರಿಯೆ ಆರಂಭಿಸಿದೆ ಎಂದು ಅಧಿಕಾರಿ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.