ಹೈದರಾಬಾದ್: ನಗರದಲ್ಲಿಕಳೆದ ತಿಂಗಳಷ್ಟೇ ಆರಂಭವಾದಭಾರತದ ದೊಡ್ಡ ಫರ್ನಿಚರ್ ಅಂಗಡಿ ‘ಐಕೆಇಎ’ ಆವರಣದಲ್ಲಿರುವರೆಸ್ಟೋರೆಂಟ್ನಲ್ಲಿ ದೊರೆಯುತ್ತಿರುವಆಹಾರ ಪದಾರ್ಥಗಳಲ್ಲಿಕ್ರಿಮಿ–ಕೀಟಗಳು ಸಿಗುತ್ತಿವೆ ಎಂದು ಆರೋಪಿಸುತ್ತಿರುವ ಗ್ರಾಹಕರು ವಿಡಿಯೊ, ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸೆ.12ರಂದು ಕಿಶೋರ್ ಎಂಬುವರು ಚಾಕಲೇಟ್ ಕೇಕ್ ಆರ್ಡರ್ ಮಾಡಿದ್ದರು. ಇವರ ಮಗಳು ಊಟ ಮಾಡಿದ ನಂತರ ಕೇಕ್ ತಿನ್ನಲು ಹೋದಾಗ ಕೇಕ್ ತುಂಡಿನಲ್ಲಿ ಇರುವೆ ಕಾಣಿಸಿದೆ.ಕೇಕ್ನಲ್ಲಿ ಇರುವೆ ಹರಿದಾಡುತ್ತಿರುವುದನ್ನು ವಿಡಿಯೊ ಮಾಡಿ ಬಿಲ್ ಸಮೇತ ಹೈದರಾಬಾದ್ ಪೊಲೀಸ್ ಹಾಗೂ ಪುರಸಭೆಗೆ ಟ್ಯಾಗ್ ಮಾಡಿದ್ದರು.

ಇದನ್ನು ಪರಿಶೀಲಿಸಿದ ಪುರಸಭೆ ಬುಧವಾರ (ಸೆ.19) ₹5ಸಾವಿರ ದಂಡ ವಿಧಿಸಿದೆ.

ಇದೇ ರೆಸ್ಟೋರೆಂಟ್ನಿಂದ ತರಿಸಿದ್ದ ಬಿರಿಯಾನಿಯಲ್ಲಿ ಕಂಬಳಿಹುಳು ದೊರೆತಿದೆ ಎಂದು ಮತ್ತೊಬ್ಬರು ಗ್ರಾಹಕರು ಈ ಹಿಂದೆ ಟ್ವಿಟ್ ಮಾಡಿದ್ದರು.

ಈ ಬಗ್ಗೆ ಕ್ಷಮೆಯಾಚಿಸಿರುವ ರೆಸ್ಟೋರೆಂಟ್ ವಕ್ತಾರ, ಗ್ರಾಹಕರಿಗೆ ನಮ್ಮಿಂದಾದ ತೊಂದರೆ ಬಗ್ಗೆ ಕ್ಷಮೆ ಕೋರುತ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿ ಪ್ರಮಾದವಾಗದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದ್ದಾರೆ.

ಐಕೆಇಎ ರೆಸ್ಟೋರೆಂಟ್

13 ಎಕರೆ ಪ್ರದೇಶದಲ್ಲಿರುವ ಭಾರತದ ದೊಡ್ಡ ಫರ್ನಿಚರ್ ಅಂಗಡಿಯಲ್ಲಿ1000 ಆಸನಗಳನ್ನು ಹೊಂದಿರುವ ರೆಸ್ಟೊರೆಂಟ್ ಇದೆ.ಭಾರತ ಸೇರಿದಂತೆ ವಿಶ್ವದ ವಿವಿಧ ಶೈಲಿಯ ಆಹಾರಗಳನ್ನು ಇದು ಒದಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.