ನವದೆಹಲಿ: ‘ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರವೂ ಜೈಲಿನಲ್ಲಿರುವಂತೆಯೇ ಭಾಸವಾಗುತ್ತಿದೆ’ ಎಂದು ಮಾವೊವಾದಿಗಳೊಂದಿಗೆ ನಂಟಿತ್ತು ಎಂಬ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನಿಂದ ಖುಲಾಸೆಗೊಂಡಿರುವ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಹೇಳಿದರು.

‘ನಾನು ಸ್ವತಂತ್ರ ಎಂದು ಹೇಳಿಕೊಳ್ಳಲು ನನಗೆ ಇನ್ನೂ ಸಾಧ್ಯವಾಗುತ್ತಿಲ್ಲ. ನಾನಿನ್ನೂ ಕುಖ್ಯಾತ ಜೈಲಿನಲ್ಲಿದ್ದೇನೆ ಎಂಬ ಭಾವನೆಯಾಗುತ್ತಿದೆ. ಜೈಲುವಾಸ ನನಗೆ ಅಗ್ನಿಪರೀಕ್ಷೆಯಂತಿತ್ತು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜೈಲಿನಲ್ಲಿದ್ದಾಗ ಕುಟುಂಬದ ಪರಿಸ್ಥಿತಿ ಹೇಗಿತ್ತು ಎನ್ನುವ ಕುರಿತು ಮಾತನಾಡುವಾಗ ಭಾವುಕರಾದ ಸಾಯಿಬಾಬಾ, ‘ನನ್ನ ಕುಟುಂಬ ಕಳಂಕ ಎದುರಿಸಿತು. ಭರವಸೆಯಿಂದಷ್ಟೇ ಬದುಕಿದರು’ ಎಂದು ಕಣ್ಣೀರಾದರು.

‘ನನ್ನನ್ನು ಭಯೋತ್ಪಾದಕ ಎಂದು ಕರೆಯಲಾಯಿತು. ನನ್ನ ಪರ ವಾದಿಸಿದ ವಕೀಲರೊಬ್ಬರು ಜೈಲಿನಲ್ಲಿದ್ದಾರೆ. ವಿಚಾರಣೆ ಸಮಯದಲ್ಲಿ ನನ್ನ ಪರ ವಕೀಲರಿಗೆ ಪೊಲೀಸರು ಬೆದರಿಕೆ ಹಾಕಿದರು’ ಎಂದು ದೂರಿದರು.

‘ಯಾವುದೇ ಶುಲ್ಕ ಪಡೆಯದೇ ನನ್ನ ಪರ ವಾದಿಸಿದ ವಕೀಲರಿಗೆ ಧನ್ಯವಾದ ಹೇಳುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.