ಲಖನೌ: ದೇಶದ ನಾಗರೀಕರು ತಪ್ಪದೆ ತೆರಿಗೆ ಕಟ್ಟಬೇಕು, ಇದರಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ಎಂದುರಾಷ್ಟ್ರಪತಿ ರಾಮನಾಥ ಕೋವಿಂದ್ ತಿಳಿಸಿದರು.

ತವರು ರಾಜ್ಯ ಉತ್ತರಪ್ರದೇಶಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿಗಳು ಇಲ್ಲಿನಜಿನ್‌ಜಾಕ್ ರೈಲು ನಿಲ್ದಾಣದ ಸಮೀಪ ಸ್ಥಳೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಮನಥ್ ಕೋವಿಂದ್ ಅವರ ಹುಟ್ಟೂರು ಪರೌಂಖ್ ಗ್ರಾಮಜಿನ್‌ಜಾಕ್ ಪಟ್ಟಣದ ಸಮೀಪದಲ್ಲಿದೆ.

ದೇಶದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಬೇಕಾದರೆ ನಾಗರೀಕರು ಜವಾಬ್ದಾರಿಯುತವಾಗಿ ತೆರಿಗೆಯನ್ನು ಪಾವತಿಸಬೇಕು. ನಾನು ಕೂಡ ತಪ್ಪದೇ ತೆರಿಗೆಯನ್ನು ಕಟ್ಟುತ್ತೇನೆ ಎಂದರು.

ದೇಶದ ಮೊದಲ ಪ್ರಜೆಯಾಗಿರುವ ನಾನು ಮಾಸಿಕ ₹ 5 ಲಕ್ಷ ವೇತನ ಪಡೆಯುತ್ತೇನೆ, ಅದರಲ್ಲಿ ₹ 2.75 ಲಕ್ಷ ಹಣವನ್ನು ತೆರಿಗೆಗೆ ಪಾವತಿಸುತ್ತೇನೆ ಎಂದು ಕೋವಿಂದ್ ಹೇಳಿದರು. ಇದರಲ್ಲಿ ನಾನು ಉಳಿಸುವುದಕ್ಕಿಂತ ಹೆಚ್ಚಿನ ಮೊತ್ತವನ್ನು ನಮ್ಮ ಅಧಿಕಾರಿಗಳು, ಇಲ್ಲಿ ಸೇರಿರುವ ಶಿಕ್ಷಕರೂ ಸಂಬಳವಾಗಿ ಪಡೆಯುತ್ತಾರೆ ಎಂದರು.

ನಾವು–ನೀವು ತೆರಿಗೆ ಪಾವತಿಸಿದರೆ ಮಾತ್ರ ದೇಶದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲು ಸಾಧ್ಯ ಎಂದು ಹೇಳುವ ಸಲುವಾಗಿ ಇಲ್ಲಿ ವೇತನದ ವಿಷಯವನ್ನು ಪ್ರಸ್ತಾಪ ಮಾಡಿದೆ ಎಂದು ರಾಮನಾಥ್ ಕೋವಿಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.