ನವದೆಹಲಿ: ಐಸಿಎಸ್ಇ 10ನೇ ತರಗತಿ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು,ನಾಲ್ವರು ವಿದ್ಯಾರ್ಥಿಗಳು ಶೇ 99.8ರಷ್ಟು ಅಂಕಗಳನ್ನು ಪಡೆಯುವ ಮೂಲಕ ಮೊದಲನೇ ರ್ಯಾಂಕ್ಅನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆ ಫಲಿತಾಂಶ ಶೇ 99.97ರಷ್ಟು ಎಂದು ಮೂಲಗಳು ತಿಳಿಸಿವೆ.

ಹರ್ಗುನ್ ಕೌರ್ ಮಥಾರು (ಪುಣೆ), ಅನಿಕಾ ಗುಪ್ತಾ (ಕಾನ್ಪುರ), ಪುಷ್ಕರ್ ತ್ರಿಪಾಠಿ (ಬಲರಾಂಪುರ, ಉತ್ತರಪ್ರದೇಶ) ಹಾಗೂ ಕನಿಷ್ಕಾ ಮಿತ್ತಲ್ (ಲಖನೌ) ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಗಳು.

34 ವಿದ್ಯಾರ್ಥಿಗಳು ಎರಡನೇ ರ್ಯಾಂಕ್ ಹಂಚಿಕೊಂಡಿದ್ದು, ಶೇ 99.6ರಷ್ಟು ಅಂಕ ಗಳಿಸಿದ್ದಾರೆ. ಶೇ 99.4ರಷ್ಟು ಅಂಕ ಗಳಿಸಿರುವ 72 ವಿದ್ಯಾರ್ಥಿಗಳು ಮೂರನೇ ರ್ಯಾಂಕ್ ಪಡೆದಿದ್ದಾರೆ.

ಐಸಿಎಸ್ಇ ಪರೀಕ್ಷೆ ಫಲಿತಾಂಶದಲ್ಲಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಕುಳಿತವರ ಪೈಕಿ ಶೇ 99.08ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರೆ, ಉತ್ತೀರ್ಣರಾದ ಬಾಲಕರ ಪ್ರಮಾಣ ಶೇ 99.07.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.