ಜಮ್ಮು: ‘ಇಲ್ಲಿನ ಹೊರವಲಯದ ಸತವಾರಿ ಪ್ರದೇಶದ ಫಲಾ ಮಂಡಲ್ ಪೋಸ್ಟ್ ಬಳಿ ಎರಡು ಕಚ್ಚಾ ಬಾಂಬ್‌ಗಳುಮಂಗಳವಾರ ಪತ್ತೆಯಾಗಿದ್ದು, ನಿಯಂತ್ರಿತ ಸ್ಫೋಟದ ಮೂಲಕ ಅವುಗಳನ್ನು ನಿಷ್ಕ್ರೀಯಗೊಳಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.

‘ಸಮಯಕ್ಕೆ ಸರಿಯಾಗಿ ಬಾಂಬ್‌ಗಳನ್ನು ನಿಷ್ಕ್ರೀಯಗೊಳಿಸಿದ್ದರಿಂದ ಜಮ್ಮುವಿನಲ್ಲಿ ನಡೆಯಬಹುದಾಗಿದ್ದ ದೊಡ್ಡ ಭಯೋತ್ಪಾದನಾ ಕೃತ್ಯವನ್ನು ತಡೆದಂತಾಗಿದೆ’ ಎಂದು ಅವರು ತಿಳಿಸಿದರು.

‘ಡ್ರೋನ್‌ಗಳ ಸಹಾಯದಿಂದ ಬಾಂಬ್‌ಗಳನ್ನು ಈ ಪ್ರದೇಶದಲ್ಲಿ ಇರಿಸಿರಬಹುದು ಎಂದು ಅನುಮಾನಿಸಲಾಗಿದೆ. ಬಾಂಬ್‌ಗಳು ಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಗತಿಯಲ್ಲಿದೆ’ ಎಂದರು.

‘ಫಲಾ ಮಂಡಲ್ ಪೋಸ್ಟ್ ಬಳಿ ಗಸ್ತು ತಿರುಗುತ್ತಿದ್ದ ವೇಳೆ, ಕಪ್ಪು ಬ್ಯಾಗ್‌ವೊಂದರಲ್ಲಿ 500 ಗ್ರಾಂ ತೂಕದ ಎರಡು ಕಚ್ಚಾ ಬಾಂಬ್‌ಗಳು ಸೋಮವಾರ ಸಂಜೆ ಪತ್ತೆಯಾಗಿದ್ದವು. ತಕ್ಷಣವೇ ಬಾಂಬ್ ನಿಷ್ಕ್ರೀಯ ದಳಕ್ಕೆ ಈ ಬಗ್ಗೆ ಮಾಹಿತಿ ನೀಡಲಾಯಿತು’ ಎಂದರು.

‘ಎರಡು ಕಚ್ಚಾ ಬಾಂಬ್‌ಗಳಿಗೂ ಟೈಮರ್ ಅಳವಡಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ 12.25ರ ಸುಮಾರಿಗೆ ಬಾಂಬ್‌ಗಳನ್ನು ನಿಯಂತ್ರಿತವಾಗಿ ಸ್ಫೋಟಗೊಳಿಸುವ ಮೂಲಕ ನಿಷ್ಕ್ರೀಯಗೊಳಿಸಲಾಯಿತು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.