ಇಂದೋರ್: ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಐಐಟಿ) ದೇಶದ ಸೈನಿಕರಿಗಾಗಿ ತಂತ್ರಜ್ಞಾನ ಆಧಾರಿತ ವಿಶೇಷ ಶೂಗಳನ್ನು ಅಭಿವೃದ್ಧಿಪಡಿಸಿದೆ. ಈ ಶೂಗಳಿಂದ ವಿದ್ಯುತ್ ಉತ್ಪಾದನೆಯಾಗಲಿದೆ ಮತ್ತು ಅವುಗಳನ್ನು ಧರಿಸಿರುವವರ ನಿಖರ ಲೊಕೇಶನ್ ಪತ್ತೆ ಮಾಡಬಹುದಾಗಿದೆ. ಈ ಆವಿಷ್ಕಾರವು ಸೇನಾಪಡೆಯ ಸುರಕ್ಷತೆ ಮತ್ತು ದಕ್ಷತೆಗೆ ಮತ್ತಷ್ಟು ಬಲ ತುಂಬಲಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

ಐಐಟಿಯು ಇಂಥ 10 ಜೊತೆ ಶೂಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಈಗಾಗಲೇ ಕಳುಹಿಸಿದೆ ಎಂದು ಹೇಳಿದರು.

‘ಪ್ರೊ.ಐ.ಎ. ಪಳನಿ ಅವರ ಮಾರ್ಗದರ್ಶನದಿಂದ ಈ ಶೂಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳಲ್ಲಿ ಟ್ರೈಬೊ–ಎಲೆಕ್ಟ್ರಿಕ್ ನ್ಯಾನೊಜನರೇಟರ್ ಅಳವಡಿಸಿದ್ದು, ಅದರಿಂದ ಪ್ರತಿ ಸಲ ಹೆಜ್ಜೆ ಇಟ್ಟಾಗಲೂ ವಿದ್ಯುತ್ ಉತ್ಪಾದನೆಯಾಗುತ್ತದೆ. ಶೂಗಳಲ್ಲಿ ಅಳವಡಿಸಿರುವ ಸಾಧನವೊಂದರಲ್ಲಿ ವಿದ್ಯುತ್ ಸಂಗ್ರಹವಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಮರೆವಿನ ಕಾಯಿಲೆಯಿಂದ ಬಳಲುವ ವಯಸ್ಸಾದ ನಾಗರಿಕರು, ಮಕ್ಕಳು, ಸಾಹಸಿಗಳು ಸಹ ಇಂಥ ಶೂಗಳನ್ನು ಬಳಸುವುದರಿಂದ ಅವರನ್ನು ಸುಲಭವಾಗಿ ಪತ್ತೆ ಮಾಡಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.