ಚೆನ್ನೈ: ‘ವಾಧ್ವಾನಿ ಸ್ಕೂಲ್ ಆಫ್ ಡೇಟಾ ಸೈನ್ಸ್ ಅಂಡ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ಸ್ಥಾಪನೆಗಾಗಿ ಐಐಟಿ–ಮದ್ರಾಸ್‌ಗೆ ₹ 110 ಕೋಟಿಯಷ್ಟು ದೊಡ್ಡ ಮೊತ್ತದ ದತ್ತಿ ನಿಧಿಯನ್ನು ಸಂಸ್ಥೆಯ ಹಳೆಯ ವಿದ್ಯಾರ್ಥಿ ಸುನಿಲ್ ವಾಧ್ವಾನಿ ನೀಡಿದ್ದಾರೆ.

ದೇಶದ ಶಿಕ್ಷಣ ಸಂಸ್ಥೆಗಳಲ್ಲಿಯೇ ಒಂದು ಅಧ್ಯಯನ ಶಾಖೆಯನ್ನು ಸ್ಥಾಪಿಸಲಿಕ್ಕೆ ನೀಡಿರುವ ಬೃಹತ್ ದತ್ತಿ ನಿಧಿಗಳಲ್ಲಿ ಇದೂ ಒಂದಾಗಿದೆ ಎಂದು ಐಐಟಿ–ಮದ್ರಾಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಐಗೇಟ್ ಹಾಗೂ ಮಾಸ್‌ಟೆಕ್ ಡಿಜಿಟಲ್ ಕಂಪನಿಗಳ ಸಹ ಸ್ಥಾಪಕರೂ ಆಗಿರುವ ಸುನಿಲ್ ವಾಧ್ವಾನಿ ಹಾಗೂ ಐಐಟಿ–ಮದ್ರಾಸ್‌ನ ನಿರ್ದೇಶಕ ಪ‍್ರೊ. ವಿ. ಕಾಮಕೋಟಿ ದತ್ತಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ದತ್ತಾಂಶ ವಿಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸರ್ಕಾರ ಹಾಗೂ ನೀತಿ ನಿರೂಪಕರಿಗೆ ಸಲಹೆ ನೀಡುವ ಗುರಿಯಿಂದ ‘ವಾಧ್ವಾನಿ ಸ್ಕೂಲ್ ಆಫ್ ಡೇಟಾ ಸೈನ್ಸ್ ಅಂಡ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ಕಾರ್ಯನಿರ್ವಹಿಸಿಲಿದೆ ಎಂದೂ ಪ್ರಕಟಣೆ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.