ನವದೆಹಲಿ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್, 2024–25ನೇ ಶೈಕ್ಷಣಿಕ ಸಾಲಿನಿಂದ ಪದವಿ ಶಿಕ್ಷಣದಲ್ಲಿ ಕ್ರೀಡಾ ಕೋಟಾ ಪರಿಚಯಿಸಿದೆ. ಪ್ರತಿ ಕೋರ್ಸ್‌ನಲ್ಲೂ ಎರಡು ಹೆಚ್ಚುವರಿ ಸೀಟುಗಳನ್ನು ರಚಿಸಿದೆ ಎಂದು ನಿರ್ದೇಶಕ ವಿ.ಕಾಮಕೋಟಿ ತಿಳಿಸಿದ್ದಾರೆ.

ಈ ಮೂಲಕ ಕ್ರೀಡಾ ಕೋಟಾವನ್ನು ಪರಿಚಯಿಸಿದ ಮೊದಲ ಐಐಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಸಾಮಾನ್ಯ ವರ್ಗಕ್ಕೆ ಒಂದು ಸೀಟಿದ್ದರೆ, ಇನ್ನೊಂದನ್ನು ಯುವತಿಯರಿಗೆ ಮೀಸಲಿಡಲಾಗಿದೆ.

ಕ್ರೀಡಾ ಕೋಟಾದಡಿ ಪ್ರವೇಶ ಪಡೆಯಲು, ಐಐಟಿ ಪ್ರವೇಶಕ್ಕಾಗಿರುವ ಅರ್ಹತಾ ಮಾನದಂಡಗಳ ಪ್ರಕಾರ ದ್ವಿತೀಯ ಪಿಯುನಲ್ಲಿ ಅಂಕ ಗಳಿಸಿರಬೇಕು. ಜೆಇಇ (ಅಡ್ವಾನ್ಸ್ಡ್)ನಲ್ಲಿ ಸಾಮಾನ್ಯ ಶ್ರೇಣಿ ಪಟ್ಟಿ ಅಥವಾ ವರ್ಗವಾರು ಶ್ರೇಣಿ ಪಟ್ಟಿಯಲ್ಲಿ ಸ್ಥಾನ ಪಡೆದಿರಬೇಕು. ಕಳೆದ ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪದಕ ಗೆದ್ದಿರಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.