ನವದೆಹಲಿ: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) 24 ತಾಸಿನ ಮುಷ್ಕರ ಹಮ್ಮಿಕೊಂಡಿದೆ.

ವೈದ್ಯರ ಮುಷ್ಕರ ಇಂದು ಬೆಳಿಗ್ಗೆ 6 ಗಂಟೆಯಿಂದ ಮುಷ್ಕರ ಆರಂಭಗೊಂಡಿದೆ. ಭಾನುವಾರ ಬೆಳಿಗ್ಗೆ 6ರವರೆಗೆ ಮುಷ್ಕರ ಮುಂದುವರಿಯಲಿದೆ.

24 ತಾಸು ತುರ್ತು ಸೇವೆ ಹೊರತುಪಡಿಸಿದ ಸೇವೆಗಳನ್ನು ರಾಷ್ಟ್ರದಾದ್ಯಂತ ಸ್ಥಗಿತಗೊಳಿಸುವುದಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ.

ಐಎಂಎ ಕರ್ನಾಟಕ ಶಾಖೆ ನೇತೃತ್ವದಲ್ಲಿ ರಾಜ್ಯದಲ್ಲೂ ಮುಷ್ಕರ ನಡೆಯುತ್ತಿದೆ.

ಅಗತ್ಯ ಸೇವೆ, ತುರ್ತು ಚಿಕಿತ್ಸೆಗಳಿಗೆ ಅಡ್ಡಿಯಾಗುವುದಿಲ್ಲ. ಹೊರ ರೋಗಿ ಸೇವೆಗಳು (ಒಪಿಡಿ) ಲಭ್ಯವಿರುವುದಿಲ್ಲ, ತುರ್ತು ಅಲ್ಲದ ಶಸ್ತ್ರಚಿಕಿತ್ಸೆಗಳನ್ನು ಪ್ರತಿಭಟನೆ ಅವಧಿಯಲ್ಲಿ ನಡೆಸುವುದಿಲ್ಲ ಎಂದು ಐಎಂಎ ಸ್ಪಷ್ಟಪಡಿಸಿದೆ.
.ಆಸ್ಪತ್ರೆ ಮೇಲಿನ ದಾಳಿ | ಆಡಳಿತ ಯಂತ್ರದ ಸಂಪೂರ್ಣ ವೈಫಲ್ಯ: ಕಲ್ಕತ್ತ ಹೈಕೋರ್ಟ್.ಕೋಲ್ಕತ್ತ | ಆರ್.ಜಿ.ಕರ್ ಆಸ್ಪತ್ರೆ ಧ್ವಂಸ ಪ್ರಕರಣ: 19 ಮಂದಿ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.