ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಿದ್ದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಅಮಾನತು ಮಾಡಿದೆ.

ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಆರ್.ವಿ. ಅಶೋಕನ್ ಸ್ವಯಂಪ್ರೇರಿತರಾಗಿ ರಚಿಸಿದ್ದ ಸಮಿತಿಯು ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟಣೆ ತಿ:ಳಿಸಿದೆ.

‘ಸಮಿತಿ ಸದಸ್ಯರು ಮತ್ತು ಐಎಂಎ ಅಧ್ಯಕ್ಷರು ಸಹ ಸಂತ್ರಸ್ತೆ ಮನೆಗೆ ಭೇಟಿ ನೀಡಿದ್ದಾರೆ. ಪರಿಸ್ಥಿತಿ ನಿಭಾಯಿಸುವಲ್ಲಿ ನಿಮ್ಮ ಲೋಪ ಕುರಿತಂತೆ ಪೋಷಕರು ದೂರಿದ್ದಾರೆ. ನೀವು ಪ್ರಕರಣವನ್ನು ಸಹಾನುಭೂತಿ ಮತ್ತು ಸೂಕ್ಷ್ಮತೆಯಿಂದ ನಿಭಾಯಿಸುವಲ್ಲಿ ವಿಫಲರಾಗಿದ್ದೀರಿ’ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ವೈದ್ಯ ವೃತ್ತಿಗೆ ನಿಮ್ಮಿಂದ ಬಂದಿರುವ ಅಪಖ್ಯಾತಿ ಹಿನ್ನೆಲೆಯಲ್ಲಿ ಕ್ರಮಕ್ಕೆ ಪಶ್ಚಿಮ ಬಂಗಾಳದ ಐಎಂಎ ರಾಜ್ಯ ಘಟಕ, ಇತರೆ ವೈದ್ಯಕೀಯ ಸಂಘಗಳೂ ಒತ್ತಾಯಿಸಿವೆ. ಹೀಗಾಗಿ, ಐಎಂಎಯ ಶಿಸ್ತು ಸಮಿತಿ ನಿಮ್ಮ ಸದಸ್ಯತ್ವ ಅಮಾನತಿಗೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ ಎಂದೂ ಅದು ತಿಳಿಸಿದೆ.

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ಭಾಗವಾಗಿ ಕೇಂದ್ರೀಯ ರನಿಖಾ ದಳವು(ಸಿಬಿಐ) ಆರ್.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಬುಧವಾರ(ಆಗಸ್ಟ್ 26) ಎರಡನೇ ಸುತ್ತಿನ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿತ್ತು.

ಮೆಡಿಕಲ್ ಕಾಲೇಜಿನ ಹಣಕಾಸು ವ್ಯವಹಾರದಲ್ಲಿ ಭ್ರಷ್ಟಾಚಾರ ಕುರಿತಂತೆ ತನಿಖೆಗೂ ಕಲ್ಕತ್ತ ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.