ನವದೆಹಲಿ: ಜಮ್ಮು–ಕಾಶ್ಮೀರಕ್ಕೆ ಕೂಡಲೇ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವುದು ಅತ್ಯಂತ ಪ್ರಮುಖವಾದದ್ದು ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಬುಧವಾರ ಭದ್ರತಾ ಪರಿಶೀಲನಾ ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ. ಅವರ ಭದ್ರತೆಯನ್ನು ನೋಡಿಕೊಳ್ಳಬೇಕಿರುವುದು ಮುಖ್ಯಮಂತ್ರಿಗಳ ಹೊಣೆ. ಆದರೆ, ಮುಖ್ಯಮಂತ್ರಿಗೆ ಯಾವುದೇ ಅಧಿಕಾರವಿಲ್ಲ. ಹೀಗಾಗಿ, ಜಮ್ಮು–ಕಾಶ್ಮೀರಕ್ಕೆ ಕೂಡಲೇ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವುದು ಅತ್ಯಂತ ಪ್ರಮುಖವಾದದ್ದು ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪರಿಶೀಲನೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸಭೆ ನಡೆಸಿರುವ ಚಿತ್ರಗಳು ಏನು ಹೇಳುತ್ತವೆ ಎಂದು ಪ್ರಶ್ನಿಸಿದ್ದಾರೆ.

‘ಸಭೆಯಲ್ಲಿ ಚುನಾಯಿತ ಮುಖ್ಯಮಂತ್ರಿಗಳು ಹಾಜರಿರಲಿಲ್ಲ. ಅವರಿಗೆ ಆಹ್ವಾನ ಇತ್ತೇ? ಇಲ್ಲವೇ? ಎಂಬ ಬಗ್ಗೆ ನನಗೆ ತಿಳಿದಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ ಕಾನೂನಿನಡಿ, ಪೊಲೀಸ್ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಲೆಫ್ಟಿನೆಂಟ್ ಗವರ್ನರ್ಗೆ ಮೀಸಲಾಗಿದೆ’ಎಂದು ಬರೆದುಕೊಂಡಿದ್ದಾರೆ.

ಜನರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ. ಅವರ ಭದ್ರತೆ, ಇತರೆ ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯಮಂತ್ರಿಗಳ ಹೊಣೆ. ಆದರೆ, ಮುಖ್ಯಮಂತ್ರಿಗೆ ಯಾವುದೇ ಅಧಿಕಾರವಿಲ್ಲ. ಹೀಗಾಗಿಯೇ, ಜಮ್ಮು–ಕಾಶ್ಮೀರವನ್ನು ಅರ್ಧ ರಾಜ್ಯ ಎಂದು ಕರೆಯಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಕೂಡಲೇ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವುದು ಅತ್ಯಂತ ಪ್ರಮುಖ ಎಂದಿದ್ದಾರೆ.

ಬುಧವಾರ ಭದ್ರತಾ ಸಭೆ ನಡೆಸಿದ ಲೆಫ್ಟಿನೆಂಟ್ ಗವರ್ನರ್, ಮೂಲಸೌಕರ್ಯ ಯೋಜನೆಗಳ ಬಳಿ ಭದ್ರತಾ ಪರಿಶೀಲನೆ, ಕಾರ್ಯತಂತ್ರದ ಪ್ರದೇಶಗಳಲ್ಲಿ 24 ಗಂಟೆ ಗಸ್ತು, ಉಗ್ರರ ಉಪಟಳ ಹೆಚ್ಚಿರುವೆಡೆ ರಾತ್ರಿ ಗಸ್ತು ಹೆಚ್ಚಿಸುವಂತೆ ಸೂಚಿಸಿದ್ದರು.

ಭಾನುವಾರ ಗಂದರ್ಬಾಲ್ ಜಿಲ್ಲೆಯ ಗಗಂಗೀರ್ ಬಳಿ ಸುರಂಗ ನಿರ್ಮಾಣ ಕಾರ್ಮಿಕರ ಮೇಲೆ ನಡೆದ ಭೀಕರ ಉಗ್ರರ ದಾಳಿಯ ಬಳಿಕ ಈ ಭದ್ರತಾ ಪರಿಶೀಲನಾ ಸಭೆ ನಡೆದಿದೆ. ಈ ದಾಳಿಯಲ್ಲಿ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದರು.
.ಜಮ್ಮು ಮತ್ತು ಕಾಶ್ಮೀರ: ನೂತನ ಸಚಿವರಿಗೆ ಖಾತೆ ಹಂಚಿದ ಲೆಫ್ಟಿನೆಂಟ್ ಗವರ್ನರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.