ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ಅನುಷ್ಠಾನಗೊಳಿಸುವುದರ ಮೂಲಕ 2024ರ ಸಂಸತ್ಚುನಾವಣೆಗೂ ಮುನ್ನಎಲ್ಲ ಅಕ್ರಮ ವಲಸಿಗರನ್ನು ಹೊರ ಹಾಕುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಜಾರ್ಖಂಡ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಸೋಮವಾರ ಮಾತನಾಡಿರುವ ಅವರು, ‘ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶಾದ್ಯಂತ ಅನುಷ್ಠಾನಗೊಳಿಸಲಾಗುವುದು. ಆ ಮೂಲಕ ದೇಶದಲ್ಲಿರುವ ಎಲ್ಲಅಕ್ರಮ ವಲಸಿಗರನ್ನು ಗುರುತಿಸಿ, 2024ರ ಸಂಸತ್ ಚುನಾವಣೆಗೂ ಮುನ್ನಅವರನ್ನು ಹೊರಗೆ ಅಟ್ಟಲಾಗುವುದು,’ ಎಂದಿದ್ದಾರೆ.

ಇದೇ ವೇಳೆ ಎನ್ಆರ್ಸಿಗೆ ವಿರೋಧ ವ್ಯಕ್ತಪಡಿಸುತ್ತಿರುವಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ಅಕ್ರಮ ವಲಸಿಗರಲ್ಲಿ ರಾಹುಲ್ ಗಾಂಧಿಗೆ ಸಂಬಂಧಿಗಳಿರಬಹುದು ಎಂದು ಮೂದಲಿಸಿದ್ದಾರೆ.
‘ಯಾಕೆ ಎನ್ಆರ್ಸಿಯನ್ನು ಅನುಷ್ಠಾನ ಮಾಡಬೇಕು, ಯಾಕೆ ಅಕ್ರಮ ವಲಸಿಗರನ್ನು ಹೊರ ಹಾಕಬೇಕು, ಅಕ್ರಮ ವಲಸಿಗರು ಎಲ್ಲಿ ಹೋಗಬೇಕು ಎಂದು ರಾಹುಲ್ ಕೇಳುತ್ತಾರೆ. ಅಕ್ರಮ ವಲಸಿಗರು ಅವರ ಸಂಬಂಧಿಗಳಾ?,’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ದೇಶದೆಲ್ಲೆಡೆ ಎನ್ಆರ್ಸಿ: ಅಮಿತ್ ಶಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.