ನೇತಾಜಿ ಸುಭಾಷ್ ಚಂದ್ರ ಬೋಸ್: ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಮೃತಪಟ್ಟರು ಎಂದು ಹೇಳಲಾಗುತ್ತಿದೆ. ಆದರೆ ಅವರ ಸಾವಿನ ಬಗೆಗಿನ ವಿವಾದ ಇನ್ನೂ ಬಗೆಹರಿದಿಲ್ಲ. (ಕೃಪೆ: ವಿಕಿಮೀಡಿಯಾ ಕಾಮನ್ಸ್)
ADVERTISEMENT
ವೈಎಸ್‌ಆರ್ ರೆಡ್ಡಿ: 2009ರ ಸೆಪ್ಟೆಂಬರ್‌ನಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಲ್ಲಮಲ್ಲ ಅರಣ್ಯದಲ್ಲಿ ಪತನವಾಗಿತ್ತು. 27 ಗಂಟೆಗಳ ಶೋಧದ ಬಳಿಕ ಅವರ ಮೃತದೇಹ ಪತ್ತೆಯಾಗಿತ್ತು. (ಕೃಪೆ: ವಿಕಿಮೀಡಿಯಾ ಕಾಮನ್ಸ್)
ಸಂಜಯ್ ಗಾಂಧಿ: 1980ರಲ್ಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮಗ ಸಂಜಯ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಗ್ಲೈಡರ್ ಅಘಾತಕ್ಕೀಡಾಗಿತ್ತು. (ಕೃಪೆ: ವಿಕಿಮೀಡಿಯಾ ಕಾಮನ್ಸ್)
ಮಾಧವರಾವ್ ಸಿಂಧಿಯಾ: 2001ರಲ್ಲಿ, ಕಾಂಗ್ರೆಸ್‌ನ ಹಿರಿಯ ಮುಖಂಡ ಮಾಧವರಾವ್ ಸಿಂಧಿಯಾ ಅವರು ಪ್ರಯಾಣಿಸುತ್ತಿದ್ದ 10 ಸೀಟರ್‌ನ ಸೆಸ್ನಾ ಸಿ–90 ವಿಮಾನವು ಉತ್ತರ ಪ್ರದೇಶದ ಕಾನ್ಪುರಕ್ಕೆ ತೆರಳುವ ಮಾರ್ಗಮಧ್ಯೆ ದುರಂತಕ್ಕೀಡಾಯಿತು. ಸಿಂಧಿಯಾ ಅವರ ಜೊತೆಗಿದ್ದ ಇತರ ಆರು ಜನರೂ ಸಾವಿಗೀಡಾದರು.
ಬಾಲಯೋಗಿ: ಲೋಕಸಭೆಯ ಸ್ಪೀಕರ್ ಆಗಿದ್ದ ತೆಲುಗುದೇಶಂ ಪಕ್ಷದ ಜಿ.ಎಂ.ಸಿ. ಬಾಲಯೋಗಿ ಅವರು 2002ರ ಮಾರ್ಚ್‌ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. (ಕೃಪೆ: ವಿಕಿಮೀಡಿಯಾ ಕಾಮನ್ಸ್)
ಒ.ಪಿ. ಜಿಂದಾಲ್: ಹರಿಯಾಣದ ಅಂದಿನ ಇಂಧನ ಸಚಿವ ಹಾಗೂ ಪ್ರಸಿದ್ಧ ಉದ್ಯಮಿ ಒ.ಪಿ. ಜಿಂದಾಲ್ 2005ರ ಮಾರ್ಚ್ 31ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾದರು.
ಸುರೇಂದ್ರ ನಾಥ್: 1994ರಲ್ಲಿ ಹಿಮಾಚಲ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಪಂಜಾಬ್ ಗವರ್ನರ್ ಸುರೇಂದ್ ನಾಥ್ ಮತ್ತು ಅವರ ಕುಟಂಬದ ಒಂಬತ್ತು ಸದಸ್ಯರು ವಿಮಾನ ಅಪಘಾತದಲ್ಲಿ ಮೃತಪಟ್ಟರು.
ದೋರ್ಜಿ ಖಂಡು: 2011ರಲ್ಲಿ, ಅರುಣಾಚಲ ಪ್ರದೇಶದ ಅಂದಿನ ಮುಖ್ಯಮಂತ್ರಿ ದೋರ್ಜಿ ಖಂಡು ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. (ಕೃಪೆ: ವಿಕಿಮೀಡಿಯಾ ಕಾಮನ್ಸ್)
ಬಿಪಿನ್ ರಾವತ್: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್ ಪತನ ಗೊಂಡಿತು. ಈ ದುರಂತದಲ್ಲಿ, ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ (63), ಅವರ ಪತ್ನಿ ಮಧುಲಿಕಾ, 7 ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ. (ಕೃಪೆ: ಪಿಟಿಐ ಚಿತ್ರ)
ಸೌಂದರ್ಯ: 2004ರಲ್ಲಿ ಜನಪ್ರಿಯ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ಮೃತಪಟ್ಟರು. ಬೆಂಗಳೂರಿನಿಂದ ಆಂಧ್ರಪ್ರದೇಶದ ಕರೀಂನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು.