ನವದೆಹಲಿ: ಸ್ಥಾಯಿ ಸಮಿತಿಯ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರಲ್ಲಿ ಬೇಷರತ್ ಕ್ಷಮೆ ಯಾಚಿಸುವಂತೆ ಎಎಪಿಯ ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಧನಕರ್ ಅವರು ‘ಅನುಕಂಪದ’ ನೆಲೆಯಲ್ಲಿ ಇಡೀ ವಿಚಾರವನ್ನು ಪರಿಶೀಲಿಸಬಹುದು ಎಂದು ಕೋರ್ಟ್ ಆಶಿಸಿದೆ.

ಈ ಪ್ರಕರಣದಲ್ಲಿನ ಬೆಳವಣಿಗಳ ಬಗ್ಗೆ ದೀಪಾವಳಿ ರಜೆಯ ನಂತರ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಸೂಚಿಸಿದೆ. ಛಡ್ಡಾ ಅವರು ಧನಕರ್ ಅವರನ್ನು ಖುದ್ದಾಗಿ ಭೇಟಿ ಮಾಡಬೇಕು, ಕ್ಷಮೆ ಯಾಚಿಸಬೇಕು. ಧನಕರ್ ಅವರು ಇಡೀ ವಿಚಾರವನ್ನು ಅನುಕಂಪದಿಂದ ಪರಿಗಣಿಸಿ, ಮುಂದಡಿ ಇರಿಸಬಹುದು ಎಂದು ಕೋರ್ಟ್ ಹೇಳಿದೆ.

ಛಡ್ಡಾ ಅವರು ತಮ್ಮ ಒಪ್ಪಿಗೆ ಇಲ್ಲದೆಯೇ ನಿಲುವಳಿ ಸೂಚನೆಯೊಂದಕ್ಕೆ ತಮ್ಮ ಹೆಸರು ಸೇರಿಸಿದ್ದಾರೆ ಎಂದು ಕೆಲವು ಸಂಸದರು ದೂರಿದ್ದರು. ಇದಾದ ನಂತರದಲ್ಲಿ (ಆಗಸ್ಟ್ 11ರಿಂದ) ಛಡ್ಡಾ ಅವರನ್ನು ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.