ಲಂಡನ್ : ಭಾರತ ಮೂಲದ ಡಾ.ಸಮೀರ್ ಶಾ ಅವರನ್ನು ಬ್ರಿಟನ್ ಸರ್ಕಾರವು ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ನ (ಬಿಬಿಸಿ) ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

ಮಾಧ್ಯಮ ಕ್ಷೇತ್ರದಲ್ಲಿ 40 ವರ್ಷಗಳ ಅನುಭವ ಹೊಂದಿರುವ 71 ವರ್ಷದ ಶಾ ಅವರು, ರಿಚರ್ಡ್ ಶಾರ್ಪ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಜೊತೆಗೆ ಸಂವಹನ ನಡೆಸಿರುವುದು ವಿವಾದಕ್ಕೀಡಾದ ಬಳಿಕ ರಿಚರ್ಡ್ ಅವರು ರಾಜೀನಾಮೆ ನೀಡಿದ್ದರು.

ಶಾ ಅವರು 2019ರಲ್ಲಿ ರಾಣಿ ಎರಡನೇ ಎಲಿಜಬೆತ್ ಅವರ ಕಮಾಂಡರ್ ಆಫ್ ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್(ಸಿಬಿಇ) ಗೌರವಕ್ಕೆ ಪಾತ್ರರಾಗಿದ್ದರು.

'ಹೆಮ್ಮೆಯ ಕ್ಷಣ’: ‘ಸಮೀರ್ ಶಾ ಅವರ ಸಾಧನೆಯು ನಮಗೆ ಹೆಮ್ಮೆ ತಂದಿದೆ’ ಎಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಅವರ ಸಂಬಂಧಿಕರು ತಿಳಿಸಿದ್ದಾರೆ.

‘ಸಮೀರ್ ಅವರು 1952 ರಲ್ಲಿ ಛತ್ರಪತಿ ಸಂಭಾಜಿನಗರದಲ್ಲಿ ಜನಿಸಿದ್ದರು. ಅವರು ವರ್ಷಕೊಮ್ಮೆ ಇಲ್ಲಿಗೆ ಭೇಟಿ ನೀಡುತ್ತಾರೆ’ ಎಂದು ಸಮೀರ್ ಅವರ ಸೋದರ ಸಂಬಂಧಿ ಸುಜಾತಾ ಕಾಂಗೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.