ಶ್ರೀನಗರ: ಪಾಕಿಸ್ತಾನ ಮತ್ತು ಚೀನಾ ಕಡೆಯಿಂದ ಬರುವ ಬೆದರಿಕೆಗಳನ್ನು ಎದುರಿಸಲು ಶ್ರೀನಗರದ ವಾಯುನೆಲೆಯಲ್ಲಿ ನವೀಕರಿಸಿದ MiG-29 ಫೈಟರ್ ಜೆಟ್ಗಳ ಸ್ಕ್ವಾಡ್ರನ್ ಅನ್ನು ನಿಯೋಜಿಸಲಾಗಿದೆ.

ಈ ಫೈಟರ್ಅನ್ನು ಉತ್ತರದ ರಕ್ಷಕ ಎಂದು ಕರೆಯಲಾಗುತ್ತದೆ. ಪ್ರಮುಖವಾಗಿ ಪಾಕಿಸ್ತಾನದಿಂದ ಬರುವ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಫೈಟರ್ ಹೊಂದಿದೆ.

ಶ್ರೀನಗರವು ಎತ್ತರ ಪ್ರದೇಶದಲ್ಲಿದೆ. ಹೀಗಾಗಿ ಒತ್ತಡವೂ ಹೆಚ್ಚಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಮಿಗ್ –29 ಶತ್ರುಗಳನ್ನು ಎದುರಿಸಲು ಸಮರ್ಥವಾಗಿದೆ ಎಂದು ಭಾರತೀಯ ವಾಯುಪಡೆಯ ಪೈಲಟ್ ಸ್ಕ್ವಾಡ್ರನ್ ಲೀಡರ್ ವಿಪುಲ್ ಶರ್ಮಾ ಹೇಳಿದ್ದಾರೆ.

ಅಲ್ಲದೆ ಸಂಘರ್ಷದ ಸಮಯದಲ್ಲಿ ಶತ್ರುಗಳ ವಿಮಾನಗಳನ್ನು ನಿಷ್ಕ್ರಿಯಗೊಳಿಸುವ ಶಕ್ತಿಯನ್ನೂ ಇದು ಹೊಂದಿದೆ. ವಿಮಾನವು ರಾತ್ರಿಯಲ್ಲಿ ಕಾರ್ಯನಿರ್ವಹಿಸಬಲ್ಲದು. ಆಕಾಶದ ಮಧ್ಯದಲ್ಲೇ ವಿಮಾನಕ್ಕೆ ಇಂಧನ ತುಂಬುವ ಸಾಮರ್ಥ್ಯವಿರುವ ಕಾರಣದಿಂದಾಗಿ ದೀರ್ಘ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ವಿಮಾನಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ವಾಯುಪಡೆಯಿಂದ ಆಯ್ಕೆಯಾದ ಪೈಲಟ್ಗಳು ವಿಮಾನದ ದೊಡ್ಡ ಶಕ್ತಿ ಎಂದು ಸ್ಕ್ವಾಡ್ರನ್ನ ನಾಯಕ ಶಿವಮ್ ರಾಣಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.