ಬಾಕು, ಅಜರ್ಬೈಜಾನ್: ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ನಡೆಸಿದ ಪ್ರಯತ್ನಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದ ‘ಹವಾಮಾನ ಬದಲಾವಣೆ ಸಾಧನೆ ಸೂಚ್ಯಂಕ’ (ಸಿಸಿಪಿಐ2025) ವರದಿ ಬಿಡುಗಡೆಯಾಗಿದ್ದು, ಅಗ್ರ ದೇಶಗಳ ಪಟ್ಟಿಯಲ್ಲಿ ಭಾರತ 10ನೇ ಸ್ಥಾನ ಪಡೆದಿದೆ.

ಐರೋಪ್ಯ ಒಕ್ಕೂಟ (ಇಯು) ಸೇರಿದಂತೆ ಉತ್ತಮ ಸಾಧನೆ ತೋರಿರುವ 63 ದೇಶಗಳ ಪಟ್ಟಿಯನ್ನು ‘ಜರ್ಮನ್ವಾಚ್’, ‘ನ್ಯೂ ಕ್ಲೈಮೇಟ್ ಇನ್ಸ್ಟಿಟ್ಯೂಟ್’ ಹಾಗೂ ‘ಕ್ಲೈಮೇಟ್ ಆ್ಯಕ್ಷನ್ ನೆಟ್ವರ್ಕ್ ಇಂಟರ್ನ್ಯಾಷನಲ್’ ಪ್ರಕಟಿಸಿವೆ.

ಜಗತ್ತಿನಲ್ಲಿ ಅಧಿಕ ಪ್ರಮಾಣದಲ್ಲಿ ಉಷ್ಣವರ್ಧಕ ಅನಿಲಗಳನ್ನು ಹೊರಸೂಸುವಿಕೆ, ನವೀಕರಿಸಬಹುದಾದ ಇಂಧನಗಳು ಹಾಗೂ ಹವಾಮಾನ ನೀತಿ ವಿಷಯದಲ್ಲಿನ ಪ್ರಗತಿ ಕುರಿತು ಈ ಸಂಸ್ಥೆಗಳು ಪರಿಶೀಲನೆ ನಡೆಸುತ್ತವೆ.

ಸಿಸಿಪಿಐಗೆ ಸಂಬಂಧಿಸಿ, ಭಾರತವು 10ನೇ ಸ್ಥಾನ ಪಡೆದಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಎರಡು ಸ್ಥಾನ ಕುಸಿತ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.