ನವದೆಹಲಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ಆಯೋಗವೊಂದು (USCIRF) ಪ್ರಕಟಿಸಿದ ವರದಿಯನ್ನು, ಭಾರತ ಸರಾಸಗಟಾಗಿ ತಿರಸ್ಕರಿಸಿದೆ.

ಪೂರ್ವಗ್ರಹಪೀಡಿತವಾದ ಈ ವರದಿಯನ್ನು ಸಿದ್ಧಪಡಿಸುವ ಬದಲು, ಅದೇ ಸಮಯವನ್ನು ಅಮೆರಿಕದಲ್ಲಿನ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಮೀಸಲಿಡಬಹುದಿತ್ತು ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ನಮ್ಮ ದೃಷ್ಟಿಕೋನದಲ್ಲಿ USCIRF ಒಂದು ನಿರ್ದಿಷ್ಟ ರಾಜಕೀಯ ಉದ್ದೇಶ ಹೊಂದಿರುವ ಸಂಸ್ಥೆಯಾಗಿದೆ. ಭಾರತದ ಕುರಿತು ಅವಾಸ್ತವಿಕವಾದ ಮಾಹಿತಿ, ಪೂರ್ವಗ್ರಪೀಡಿತ ಕಟ್ಟುಕಥೆಗಳಿಂದ ಕೂಡಿದೆ. ಇಂಥ ಕೆಟ್ಟ ಪ್ರಯತ್ನಗಳಿಂದ ಈ ಸಂಸ್ಥೆ ದೂರವಿರಬೇಕು. ಅಮೆರಿಕದಲ್ಲೇ ಇರುವ ಮಾನವ ಹಕ್ಕುಗಳ ಸಮಸ್ಯೆಗಳ ಮೇಲೆ ಬೆಳೆಕು ಚೆಲ್ಲಲು ಈ ಸಂಸ್ಥೆ ತನ್ನ ಸಮಯವನ್ನು ಮೀಸಲಿಡಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.