ಮುಂಬೈ: ರಷ್ಯಾದೊಂದಿಗಿನ ಪರಮಾಣು ಒಪ್ಪಂದದ ಅನುಷ್ಠಾನಕ್ಕಾಗಿ ಭಾರತವು ಹೆಚ್ಚುವರಿ ಪ್ರದೇಶಗಳನ್ನು ಹುಡುಕುತ್ತಿದೆ. ಪ್ರಸ್ತಾವಿತ ಜೈತಾಪುರ ಪರಮಾಣು ವಿದ್ಯುತ್ ಸ್ಥಾವರ ಯೋಜನೆ ಕುರಿತು ಫ್ರಾನ್ಸ್‌ನೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೋಮವಾರ ತಿಳಿಸಿದ್ದಾರೆ.

ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್ ಮಾತನಾಡಿದರು. ವಿದೇಶಗಳೊಂದಿಗಿನ ಪರಮಾಣು ಒಪ್ಪಂದಗಳನ್ನು ನಿರೀಕ್ಷೆಯಂತೆ ಅನುಷ್ಠಾನಗೊಳಿಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ‘ಪರಮಾಣು ಹಾನಿಯ ಕುರಿತು ನಾಗರಿಕ ಹೊಣೆಗಾರಿಕಾ ಕಾಯ್ದೆ 2010 ಅನ್ನು ರೂಪಿಸಿದ ರೀತಿಯಲ್ಲಿ ವಿದೇಶಿ ಪೂರೈಕೆದಾರರ ಕಳವಳವನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ನೋಡಲು ಅವರೊಂದಿಗೆ ಸಾಕಷ್ಟು ಸಂವಾದದ ಅಗತ್ಯವಿದೆ’ ಎಂದರು.

ಈ ರೀತಿಯ ಸಂವಾದವು ಕೆಲವು ದೇಶಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಇದರಿಂದಾಗಿಯೇ ಒಟ್ಟಾರೆ ಪ್ರಕ್ರಿಯೆ ತಡವಾಗಿದೆ ಎಂದು ತಿಳಿಸಿದರು.

ಜೈಶಂಕರ್ ಅವರು ಕಳೆದ ಡಿಸೆಂಬರ್‌ನಲ್ಲಿ ರಷ್ಯಾ ಪ್ರವಾಸದಲ್ಲಿದ್ದಾಗ, ಕೂಡಂಕುಳಂ ಪರಮಾಣು ಸ್ಥಾವರದ ಭವಿಷ್ಯದ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಕೂಡಂಕುಳಂನಲ್ಲಿ ತಲಾ 1,000 ಮೆಗಾವಾಟ್‌ನ ನಾಲ್ಕು ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿದೆ ಮತ್ತು ಅದೇ ಸಾಮರ್ಥ್ಯದ ಇನ್ನೂ 2 ರಿಯಾಕ್ಟರ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದು ದೇಶದ ಅತಿದೊಡ್ಡ ಪರಮಾಣು ಪಾರ್ಕ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.