ನವದೆಹಲಿ: ‘ಸಂಘಟಿತ ವಲಯದ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ’ಒಂದು ರಾಷ್ಟ್ರ, ಒಂದು ವೇತನ ದಿನ‘ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಶುಕ್ರವಾರ ತಿಳಿಸಿದ್ದಾರೆ.

ಖಾಸಗಿ ಭದ್ರತಾ ಕೈಗಾರಿಕೆಗಳ ಕೇಂದ್ರ ಸಂಸ್ಥೆ (ಸಿಎಪಿಎಸ್‌ಐ) ಹಮ್ಮಿಕೊಂಡಿದ್ದ ಶೃಂಗಸಭೆಯಲ್ಲಿ ಮಾತನಾಡಿದ ಅವರು, ’ಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿಯಾಗುವುದನ್ನು ಖಚಿತಪಡಿಸಿಕೊಳ್ಳಲು ದೇಶದಾದ್ಯಂತ ವಿವಿಧ ವಲಯಗಳಲ್ಲಿ ಪ್ರತಿ ತಿಂಗಳು ಒಂದೇ ವೇತನ ದಿನವಿರಬೇಕು. ಈ ಕುರಿತ ಮಸೂದೆಗೆ ಶೀಘ್ರ ಅಂಗೀಕಾರ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ‘ ಎಂದು ಅವರು ಹೇಳಿದ್ದಾರೆ.

’ಎಲ್ಲಾ ವಲಯಗಳ ಕಾರ್ಮಿಕರ ಜೀವನೋಪಾಯ ರಕ್ಷಣೆಗೆ ಏಕರೂಪದ ಕನಿಷ್ಠ ವೇತನ ವ್ಯವಸ್ಥೆಯನ್ನು ಜಾರಿಗೆ ತರುವ ಕುರಿತೂ ಚಿಂತನೆ ನಡೆಸಿದ್ದೇವೆ‘ ಎಂದಿದ್ದಾರೆ.

ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ (ಒಎಸ್‌ಎಚ್) ಸಂಹಿತೆ ಮತ್ತು ವೇತನ ಸಂಹಿತೆ ಜಾರಿಗಾಗಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ವೇತನ ಸಂಹಿತೆಯನ್ನು ಸಂಸತ್ ಈಗಾಗಲೇ ಅಂಗೀಕರಿಸಿದೆ. ಇದರ ಅನುಷ್ಠಾನಕ್ಕಾಗಿ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.