ನವದೆಹಲಿ: ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಿ ಬೆಳೆಯಲು ಭಾರತವು ಕ್ರಾಂತಿಕಾರಿ ರೀತಿಯಲ್ಲಿ ಬೆಳವಣಿಗೆ ಸಾಧಿಸಬೇಕು ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಪ್ರತಿಪಾದಿಸಿದರು.

ನವದೆಹಲಿಯ ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಐಟಿ) 13ನೇ ಘಟಿಕೋತ್ಸವ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಿಸಲು ತಂತ್ರಜ್ಞಾನ ಕ್ಷೇತ್ರದ ಪ್ರಗತಿ ಮತ್ತು ಉತ್ಪನ್ನಗಳ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದರು.

‘ಭಾರತವು ಜಗತ್ತಿನ ಮೂರನೇ, ಎರಡನೇ ಅಥವಾ ಮೊದಲನೇ ಅತಿದೊಡ್ಡ ಆರ್ಥಿಕತೆಯಾಗಲು ಬಯಸಿದರೆ ಕ್ರಾಂತಿಕಾರಿ ಬದಲಾವಣೆಯ ಅಗತ್ಯವಿದೆ. ವ್ಯಾಪಾರ ಮತ್ತು ಲಭ್ಯವಿರುವ ಸಂಪನ್ಮೂಲಗಳಿಂದ ಮಾತ್ರ ಇಂತಹ ಬೆಳವಣಿಗೆ ಸಾಧ್ಯವಿಲ್ಲ. ಉತ್ಪನ್ನಗಳ ಅಭಿವೃದ್ಧಿಗೆ ಶಕ್ತಿ ತುಂಬುವಂತಹ ತಂತ್ರಜ್ಞಾನ ಬೆಳೆಸಲು ಒತ್ತು ನೀಡಬೇಕಿದೆ’ ಎಂದರು.

ಬಾಹ್ಯಾಕಾಶ ಕ್ಷೇತ್ರದಲ್ಲಿನ ಹೊಸ ಅನ್ವೇಷಣೆಗಾಗಿ ಎಲಾನ್ ಮಸ್ಕ್ ಅವರನ್ನು ಶ್ಲಾಘಿಸಿದ ಇಸ್ರೊ ಅಧ್ಯಕ್ಷರು, ‘ಮಸ್ಕ್ ಅವರ ಸಾಧನೆಗಳು ಇಸ್ರೊ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾಗತಿಕವಾಗಿ ನಡೆಯುತ್ತಿರುವ ಅಧ್ಯಯನಗಳಿಗೆ ಸ್ಫೂರ್ತಿ ನೀಡಿವೆ’ ಎಂದರು.

‘ಮಸ್ಕ್ ಅವರು ರಾಕೆಟ್ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಎಲ್ಲರ ಗಮನ ತಮ್ಮತ್ತ ಸೆಳೆಯುತ್ತಿದ್ದಾರೆ. ಯುರೋಪ್ನ ದೇಶಗಳು, ರಷ್ಯಾ ಮತ್ತು ಚೀನಾದವರೆಗೆ ಎಲ್ಲರೂ ಅವರ ಸಾಧನೆಯನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ. ಅವರು ಅದ್ಭುತ ಕೆಲಸ ಮಾಡುವಂತಹ ವ್ಯಕ್ತಿ. ಅವರ ಸಾಧನೆ ನಮಗೆಲ್ಲರಿಗೂ ಪ್ರೇರಣೆ ನೀಡಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.