ಲಾಹೋರ್: ಸಿಂಧೂ ನದಿ ಜಲ ಒಪ್ಪಂದದ ಕುರಿತು ವರ್ಷಕ್ಕೆ ಎರಡು ಬಾರಿ ಮಾತುಕತೆ ನಡೆಸಬೇಕು ಮತ್ತು ಯೋಜನೆಯ ಪ್ರದೇಶಕ್ಕೆ ತಾಂತ್ರಿಕ ಭೇಟಿ ಆಯೋಜಿಸಬೇಕು ಎಂದು ಭಾರತ ಮತ್ತು ಪಾಕಿಸ್ತಾನ ತೀರ್ಮಾನಿಸಿವೆ.

ಒಪ್ಪಂದದ ಕುರಿತು ಉಭಯ ದೇಶಗಳ ನಡುವೆ ಮಾತುಕತೆ ಇಲ್ಲಿನ ನ್ಯಾಷನಲ್ ಎಂಜಿನಿಯರಿಂಗ್ ಸರ್ವಿಸಸ್ ಕಚೇರಿಯಲ್ಲಿ ಬುಧವಾರ ಆರಂಭವಾಗಿದೆ. ಈ ವೇಳೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಎರಡು ಬಾರಿ ಮಾತುಕತೆ ಮತ್ತು ಭೇಟಿ ಆಯೋಜಿಸಲು ಪಾಕಿಸ್ತಾನ ಮಾತ್ರ ಹಲವು ತೊಂದರೆಗಳನ್ನು ಎದುರಿಸುತ್ತಿದೆ.

ಎರಡು ದಿನಗಳ ಮಾತುಕತೆಯ ಮೊದಲ ಸುತ್ತು ಬುಧವಾರ ಆರಂಭವಾಗಿದ್ದು, ಭಾರತದಿಂದ ಸಿಂಧೂ ನದಿ ಆಯೋಗದ ಆಯುಕ್ತ ಪಿ.ಕೆ.ಸಕ್ಸೇನಾ ಮತ್ತು ಪಾಕಿಸ್ತಾನದ ಆಯುಕ್ತ ಸೈಯದ್ ಮೆಹರ್ ಅಲಿ ನೇತೃತ್ವದ ನಿಯೋಗ ಇದರಲ್ಲಿ ಪಾಲ್ಗೊಂಡಿದೆ. ಸಕ್ಸೇನಾ ನೇತೃತ್ವದ ಒಂಬತ್ತು ಜನರ ನಿಯೋಗ ಮಂಗಳವಾರ ಲಾಹೋರ್‌ಗೆ ಬಂದಿದೆ.

ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಅವರು ಅಧಿಕಾರ ಸ್ವೀಕರಿಸಿದ ನಂತರ ಉಭಯ ದೇಶಗಳ ನಡೆವೆ ನಡೆಯುತ್ತಿರುವ ಮಹತ್ವದ ಮಾತುಕತೆ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.