ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಲು ಕಾರಣವಾದ ಎಂಪಾಕ್ಸ್ (ಮಂಕಿ ಪಾಕ್ಸ್) ಕ್ಲಾಡ್ 1 ತಳಿಯ ಮೊದಲ ಪ್ರಕರಣ ಭಾರತದಲ್ಲಿ ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳು ಸೋಮವಾರ ಹೇಳಿವೆ.

ಕೇರಳದ ಮಲಪ್ಪುರ ಜಿಲ್ಲೆಯ 38 ವರ್ಷದ ವ್ಯಕ್ತಿಯೊಬ್ಬರಿಗೆ ಎಂಪಾಕ್ಸ್ ಇರುವುದು ಸೆ.18ರಂದು ದೃಢಪಟ್ಟಿತ್ತು. ಅವರಲ್ಲಿ ಸೋಂಕಿಗೆ ಕಾರಣವಾಗಿರುವುದು ಎಂಪಾಕ್ಸ್ ಕ್ಲಾಡ್1 ತಳಿ ಎಂಬುದು ಪರೀಕ್ಷೆಯಲ್ಲಿ ಖಚಿತವಾಗಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಯುಎಇಯಿಂದ ಬಂದಿದ್ದ ಅವರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ತಿಂಗಳ ಆರಂಭದಲ್ಲಿ ಹರಿಯಾಣದ ಹಿಸಾರ್‌ನ 26 ವರ್ಷದ ವ್ಯಕ್ತಿಯೊಬ್ಬರಲ್ಲಿ ಎಂಪಾಕ್ಸ್ ದೃಢಪಟ್ಟಿತ್ತು. ರೋಗಿಯಲ್ಲಿ ಪಶ್ಚಿಮ ಆಫ್ರಿಕಾದ ‘ಕ್ಲಾಡ್–2’ ತಳಿಯ ವೈರಸ್ ಇರುವುದನ್ನು ಪ್ರಯೋಗಾಲಯದ ಪರೀಕ್ಷೆಯು ದೃಢಪಡಿಸಿತ್ತು.

ವಿದೇಶಗಳಿಂದ ಹಿಂದಿರುಗಿದವರಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.