ಬಾಲಸೋರ್ (ಒಡಿಶಾ): ಹೊಸ ತಲೆಮಾರಿನ ಆಕಾಶ್-ಎನ್ಜಿ ಕ್ಷಿಪಣಿಯನ್ನು ಶುಕ್ರವಾರ ಇಲ್ಲಿನ ಕರಾವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಚಾಂದಿಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ (ಐಟಿಆರ್), ಆಕಾಶ್-ಎನ್ಜಿ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಲಾಗಿದ್ದು, ದೇಶದ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಉತ್ತೇಜನ ದೊರಕಿದೆ.

ಕಡಿಮೆ ಎತ್ತರದಲ್ಲಿ ಅತಿ ವೇಗದ ಮಾನವರಹಿತ ವೈಮಾನಿಕ ಗುರಿಯನ್ನು ಯಶಸ್ವಿಯಾಗಿ ತಡೆದು ನಾಶಪಡಿಸಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಆಕಾಶ್-ಎನ್ಜಿ 80 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಶತ್ರುರಾಷ್ಟ್ರಗಳ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ.

ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೊ ಫ್ರೀಕ್ವೆನ್ಸಿ ಅನ್ವೇಷಕ, ಲಾಂಚರ್, ಮಲ್ಟಿ-ಫಂಕ್ಷನ್ ರಾಡಾರ್ ಹಾಗೂ ಕಮಾಂಡ್, ಕಂಟ್ರೋಲ್, ಕಮ್ಯುನಿಕೇಷನ್ ಸಿಸ್ಟಂ ಸೇರಿದಂತೆ ಸಮಗ್ರ ವೆಪನ್ ಸಿಸ್ಟಂ ಅನ್ನು ಹೊಂದಿದೆ.

ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ ಅಧಿಕಾರಿಗಳ ಸಮ್ಮುಖದಲ್ಲಿ ಈ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
.ರಕ್ಷಣಾ ಖರೀದಿ: ₹802 ಕೋಟಿ ಮೊತ್ತದ ಒಪ್ಪಂದ.ಪಾಕ್ ಧ್ವಜ ಹಾರಿಸಿದ್ದಕ್ಕೆ ಮಸೀದಿ ನೆಲಸಮ; ಯೋಗಿ ಆದೇಶ ಎನ್ನುವುದು ಸುಳ್ಳು ಸುದ್ದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.