ವಾಷಿಂಗ್ಟನ್: ಕಳೆದ 10 ವರ್ಷಗಳಿಂದ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಟ್ಟಿದ್ದು, ಪುನಃ ಸ್ಥಾಪಿಸುವ ಉದ್ದೇಶದಿಂದಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನಗರದ ನ್ಯಾಷನಲ್ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಫಲಿತಾಂಶವು ಪ್ರಜಾಪ್ರಭುತ್ವದ ಮೇಲಿನ ಭರವಸೆಯನ್ನು ಹೆಚ್ಚಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಹೌದು, ಭರವಸೆ ಮೂಡಿದೆ. ಆದರೆ, ಭಾರತೀಯ ಮತದಾರ ಅಷ್ಟು ಸ್ಥಿತಿಸ್ಥಾಪಕತೆ ಮತ್ತು ತಿಳುವಳಿಕೆಯುಳ್ಳವನು ಎಂದು ಹೇಳಲು ಬರುವುದಿಲ್ಲ. ಏಕೆಂದರೆ, ಭಾರತೀಯ ಮತದಾರರ ಮೇಲೆ ಬೇರೆ ಪರಿಸ್ಥಿತಿಗಳು ಪರಿಣಾಮ ಬೀರುತ್ತಿವೆ ಎಂದು ಹೇಳಿದ್ದಾರೆ.
.Haryana polls: 20 ಅಭ್ಯರ್ಥಿಗಳ ಮತ್ತೆರಡು ಪಟ್ಟಿ ಬಿಡುಗಡೆ ಮಾಡಿದ ಎಎಪಿ.ಸುಪ್ರೀಂಕೋರ್ಟ್ ನಿರ್ದೇಶನ ಧಿಕ್ಕರಿಸಿದ ಕಿರಿಯ ವೈದ್ಯರು; ಮಾತುಕತೆಗೆ ಮಮತಾ ಆಹ್ವಾನ.
‘ಮಹಾರಾಷ್ಟ್ರ ಸರ್ಕಾರ ರಚನೆ ಸಂದರ್ಭದಲ್ಲಿ ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷಗಳೊಡ್ಡಿ ಅವರ ಪಕ್ಷಕ್ಕೆ ಸೇರಿಸಿಕೊಂಡರು. ನಮ್ಮ ಶಾಸಕರು ಬಿಜೆಪಿ ಶಾಸಕರಾದರು. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಲಿದೆ‘ ಎನ್ನುವ ನಂಬಿಕೆ ಇದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು. ‘ಇಂತಹ ಘಟನೆಗಳನ್ನು ಸಿರಿಯಾ ಅಥವಾ ಇರಾಕ್ನಲ್ಲಿ ಕೇಳಿರಬಹುದು. ಆದರೆ ನಾನು ಈ ರೀತಿಯ ಪ್ರಜಾಪ್ರಭುತ್ವವನ್ನು ಎಲ್ಲಿಯೂ ನೋಡಿಲ್ಲ. ಚುನಾವಣೆಯ ಸಮಯದಲ್ಲಿ ಮತದಾರರನ್ನು ಉದ್ದೇಶಿಸಿ ಭಾಷಣಗಳನ್ನು ಹಾಗೂ ಕೆಲವೆಡೆ ಯಾತ್ರೆಗಳ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿದ್ದೇವೆ‘ ಎಂದು ಹೇಳಿದ್ದಾರೆ.
.ಜಮ್ಮು ಮತ್ತು ಕಾಶ್ಮೀರ: ಬದಲಾಗಲಿದೆಯೇ ರಾಜಕೀಯ ಲೆಕ್ಕಾಚಾರ? .ನ್ಯಾ.ಹೇಮಾ ಸಮಿತಿ ವರದಿ ಬಗ್ಗೆ ಕ್ರಮ ಜರುಗಿಸದಿರುವುದು ಆಘಾತಕಾರಿ-ಕೇರಳ ಹೈಕೋರ್ಟ್.
‘ಭಾರತದ ಇತಿಹಾಸದಲ್ಲಿ ನಾನೊಬ್ಬನೇ ಮಾನನಷ್ಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದವನು. ನನ್ನ ಮೇಲೆ ಇನ್ನೂ 20 ಪ್ರಕರಣಗಳು ಇವೆ. ಮತದಾರರ ದೃಷ್ಟಿಕೋನವನ್ನು ಬದಲಾಯಿಸಲು ಉತ್ತಮ ಸಮಾಜ ನಿರ್ಮಿಸಲು ಸಮರ್ಥ ನಾಯಕನ ಅಗತ್ಯವಿದೆ‘ ಎಂದು ತಿಳಿಸಿದ್ದಾರೆ.

‘ಚುನಾವಣೆಯ ಸಂದರ್ಭದಲ್ಲಿ 21ನೇ ಶತಮಾನದ ಪ್ರಧಾನಿಯೊಬ್ಬರು ನಾನು ದೇವರೊಂದಿಗೆ ಮಾತನಾಡುತ್ತೇನೆ. ನಾನು ದೇವರೊಂದಿಗೆ ನೇರ ಸಂಪರ್ಕದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರು. ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ನಮಗೆ ಅರಿವಾಯಿತು ಮೋದಿ ಅವರನ್ನು ನೈತಿಕವಾಗಿ ಸೋಲಿಸಿದ್ದೇವೆ‘ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
.ರೇಣುಕಸ್ವಾಮಿ ಕೊಲೆ ಪ್ರಕರಣ: ವಿಶೇಷ ನ್ಯಾಯಾಲಯಕ್ಕೆ? .ಆಳ–ಅಗಲ: ಎಂಪಾಕ್ಸ್ ಇರಲಿ ಎಚ್ಚರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.