ಕಠ್ಮಂಡು: ಭಾರತೀಯ ಪರ್ವತಾರೋಹಿ ಸತ್ಯದೀಪ್ ಗುಪ್ತಾ ಅವರು ಒಂದು ಋತುಮಾನದಲ್ಲಿ ಎರಡು ಬಾರಿಗೆ ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಲೋಟ್ಸೆ ಪರ್ವತಗಳನ್ನು ಏರುವ ಮೂಲಕ ಇತಿಹಾಸ ಬರೆದಿದ್ದಾರೆ. ಅಲ್ಲದೇ ಅವರು ಎರಡೂ ಪರ್ವತಗಳನ್ನು 11 ಗಂಟೆ 15 ನಿಮಿಷಗಳಲ್ಲಿ ಏರಿದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.

ಗುಪ್ತಾ ಅವರು 8,516 ಮೀಟರ್ ಎತ್ತದರ ಮೌಂಟ್ ಲೋಟ್ಸೆ ಪರ್ವತವನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ ಏರಿದ್ದರು. 8,849 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತವನ್ನು ಅದೇ ದಿನ ಮಧ್ಯರಾತ್ರಿ 12:45ಕ್ಕೆ ಏರಿದ್ದರು ಎಂದು ಪರ್ವತಾರೋಹಣ ಆಯೋಜಿಸುವ ‘ಪಯನಿಯರ್ ಅಡ್ವೆಂಚರ್ ಎಕ್ಸ್ಪೆಡಿಷನ್’ ಸಂಸ್ಥೆ ಹೇಳಿದೆ.

ಮಾರ್ಗದರ್ಶಕರಾದ ಪಸ್ತೆಂಬ ಶೆರ್ಪಾ ಮತ್ತು ನಿಮಾ ಉಂಗ್ಡಿ ಶೆರ್ಪಾ ಅವರು ಜತೆಗೂಡಿದ್ದರು.

ಗುಪ್ತಾ ಅವರು ಇದಕ್ಕೂ ಮೊದಲು ಮೇ 21ರಂದು ಮೌಂಟ್ ಎವರೆಸ್ಟ್ ಮತ್ತು ಮೇ 22ರಂದು ಮೌಂಟ್ ಲೋಟ್ಸೆ ಏರಿದ್ದರು. ಎರಡೂ ಪರ್ವತಗಳನ್ನು ಒಂದರ ನಂತರ ಮತ್ತೊಂದು ಏರಿದ ಮೊದಲ ಪರ್ವತಾರೋಹಿ ಎಂಬ ಹೆಗ್ಗಳಿಕೆ ಇವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.