ವಾಷಿಂಗ್ಟನ್: ಇಲ್ಲಿನ ಆಸ್ಪತ್ರೆಯೊಂದರ ಆವರಣದಲ್ಲಿ ಭಾರತೀಯ ಮೂಲದ ನರ್ಸ್ ಒಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದುದಕ್ಷಿಣ ಫ್ಲೋರಿಡಾದ ಪೊಲೀಸರು ತಿಳಿಸಿದ್ದಾರೆ.

‘ಕೇರಳದ ಮೆರಿನ್ ಜಾಯ್(26) ಅವರು ಮಂಗಳವಾರ ಕೋರಲ್ ಸ್ಪ್ರಿಂಗ್ಸ್ ಆಸ್ಪತ್ರೆಯಿಂದ ಹೊರನಡೆಯುತ್ತಿದ್ದಾಗ ವ್ಯಕ್ತಿಯೊಬ್ಬರು ಮೆರಿನ್ ಅವರನ್ನುತನ್ನ ಬಳಿಗೆ ಎಳೆದು ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಇತರರು ನರ್ಸ್ ಸಹಾಯಕ್ಕೆ ಬರುವಷ್ಟರಲ್ಲಿ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ’ ಎಂದು ಕೋರಲ್ ಸ್ಪ್ರಿಂಗ್ಸ್ ಪೊಲೀಸ್ ಉಪ ಮುಖ್ಯಸ್ಥ ಬ್ರಾಡ್ ಮೆಕ್ಕೀನ್ ತಿಳಿಸಿದರು.

ಮೆರಿನ್ ಜಾಯ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರೆಳೆದರು ಎಂದು ಅವರು ಹೇಳಿದರು.

ಕೃತ್ಯ ಎಸಗಿದ ಆರೋಪಿ ಫಿಲಿಪ್ ಮ್ಯಾಥ್ಯೂ ಅವರನ್ನು ಬಂಧಿಸಲಾಗಿದೆ. ಮೆರಿನ್ ಜಾಯ್ ಮತ್ತುಮ್ಯಾಥ್ಯೂ ನಡುವಿನ ಕುಟುಂಬ ಸಂಬಂಧಿತ ವಿವಾದ ಮೆರಿನ್ ಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.