ನ್ಯೂಯಾರ್ಕ್: ಉದ್ದೇಶಪೂರ್ವಕವಾಗಿ ಅಪಘಾತ ಎಸಗಿ 16 ವರ್ಷದ ಮೂವರು ಬಾಲಕರನ್ನು ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ಸಂಜಾತ ವ್ಯಕ್ತಿಯೊಬ್ಬರಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಕ್ಯಾಲಿಫೋರ್ನಿಯಾದ ಅನುರಾಗ್ ಚಂದ್ರ ಶಿಕ್ಷೆಗೊಳಗಾದವರು. 2020ರಲ್ಲಿ 16 ವರ್ಷದ ಮೂವರು ಬಾಲಕರು ಹಾಗೂ ಅವರ ಸ್ನೇಹಿತರು ಅನುರಾಗ್ ಅವರ ಮನೆಯ ಬಾಗಿಲ ಬೆಲ್ ಅನ್ನು ತಮಾಷೆಗಾಗಿ ಒತ್ತಿ ಓಡಿ ಹೋಗಿದ್ದರು.

ಇದರಿಂದ ಕೋಪಗೊಂಡಿದ್ದ ಅನುರಾಗ್ ಬಾಲಕರು ಚಲಾಯಿಸುತ್ತಿದ್ದ ವಾಹನಕ್ಕೆ ತಮ್ಮ ಕಾರನ್ನು ಡಿಕ್ಕಿ ಹೊಡೆಸಲು ಪ್ರಯತ್ನಿಸಿದ್ದರು. ಎಚ್ಚೆತ್ತುಗೊಂಡಿದ್ದ ಬಾಲಕರು ತಮ್ಮ ವಾಹನವನ್ನು ಯೂ ಟರ್ನ್ ತೆಗೆದುಕೊಳ್ಳಲು ಯತ್ನಿಸಿದ್ದರು. ಆದರೂ ಅನುರಾಗ್ ಬಾಲಕರನ್ನು ಹಿಂಬಾಲಿಸಿ ತಮ್ಮ ಕಾರನ್ನು ಡಿಕ್ಕಿ ಹೊಡೆಸಿದ್ದರು. ಈ ಅಪಘಾತದಲ್ಲಿ ಮೂವರು ಬಾಲಕರು ಸಾವಿಗೀಡಾಗಿ, ಇತರ ಬಾಲಕರು ಗಾಯಗೊಂಡಿದ್ದರು.

2020ರ ಜನವರಿ 20ರಂದು ಅನುರಾಗ್ ಅವರನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ ಮುಗಿದಿದ್ದು ಉದ್ದೇಶಪೂರ್ವಕವಾಗಿ ಕೊಲೆ ನಡೆದ ಆರೋಪ ಸಾಬೀತಾಗಿದ್ದರಿಂದ ಅನುರಾಗ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ರಿವರ್ ಸೈಡ್ ಕೌಂಟಿಯ ಜಿಲ್ಲಾ ಅಟಾರ್ನಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.