ಪೆಶಾವರ : ಭಾರತದಿಂದ ಬಂದು ತನ್ನ ಫೇಸ್‌ಬುಕ್ ಗೆಳೆಯನನ್ನು ವಿವಾಹವಾಗಿದ್ದ ಇಬ್ಬರು ಮಕ್ಕಳ ತಾಯಿ, 34 ವರ್ಷದ ಮಹಿಳೆಗೆ ಇಸ್ಲಾಂಗೆ ಮತಾಂತರಗೊಂಡು, ಧರ್ಮವನ್ನು ಸ್ವೀಕರಿಸಿದ್ದಕ್ಕಾಗಿ ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ನಗದು ಮತ್ತು ಭೂಮಿಯನ್ನು ಉಡುಗೊರೆ ನೀಡಿದ್ದಾರೆ.

ಭಾರತದ ಅಂಜು ಇಸ್ಲಾಂಗೆ ಮತಾಂತರಗೊಂಡ ಬಳಿಕ ಫಾತಿಮಾ ಎಂದು ಹೆಸರು ಬದಲಿಸಿಕೊಂಡಿದ್ದರು. ಜುಲೈ 25ರಂದು ತನ್ನ 29 ವರ್ಷದ ಗೆಳೆಯ ನಸ್ರುಲ್ಲಾರನ್ನು ಉಪ್ಪೆರ್ ದಿರ್ ಜಿಲ್ಲೆಯ ಗ್ರಾಮವೊಂದರಲ್ಲಿ ಮದುವೆಯಾಗಿದ್ದರು.

ಶನಿವಾರ ಆಕೆಯನ್ನು ಭೇಟಿಯಾದ ರಿಯಲ್ ಎ ಸ್ಟೇಟ್ ಉದ್ಯಮಿ ಮೊಹಿಸಿನ್ ಖಾನ್ ಅಬ್ಬಾಸಿ ಅವರು, ನಗದು ನೆರವಿನ ಚೆಕ್ (ಮೊತ್ತ ಬಹಿರಂಗಪಡಿಸಿಲ್ಲ) ಹಾಗೂ 10 ಮಾರ್ಲಾ ಅಳತೆಯ (ಅಂದಾಜು 2,722 ಚದರ ಅಡಿ) ಭೂಮಿಗೆ ಸಂಬಂಧಿಸಿದ ದಾಖಲಾತಿಗಳನ್ನು ಹಸ್ತಾಂತರಿಸಿದರು.

‘ಇಸ್ಲಾಂಗೆ ಮತಾಂತರಗೊಂಡಿರುವ ಅವರು ಯಾವುದೇ ತೊಡಕಿಲ್ಲದೆ ಇಲ್ಲಿ ಹೊಸ ಬದುಕು ನಡೆಸಬೇಕು ಎಂಬ ಕಾರಣದಿಂದ ಈ ಕೊಡುಗೆ ನೀಡಿದ್ದೇನೆ. ಆಕೆಯನ್ನು ನಮ್ಮ ಧರ್ಮಕ್ಕೆ ಸ್ವಾಗತಿಸಲು ಮತ್ತು ಮದುವೆಗಾಗಿ ಅವರನ್ನು ಅಭಿನಂದಿಸುವುದು ನನ್ನ ಉದ್ದೇಶವಾಗಿದೆ’ ಎಂದು ಅಬ್ಬಾಸಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.