ನವದೆಹಲಿ: ಇದೇ 16ರಂದು ಇಸ್ತಾನ್ಬುಲ್ನಿಂದ ದೆಹಲಿಯತ್ತ ಬರುತ್ತಿದ್ದಇಂಡಿಗೊ ವಿಮಾನದಲ್ಲಿಊಟದ ಆಯ್ಕೆ ವಿಚಾರಕ್ಕೆ ಗಗನಸಖಿ ಹಾಗೂ ಪ್ರಯಾಣಿಕರೊಬ್ಬರ ನಡುವೆ ವಿಮಾನದಲ್ಲೇ ವಾಗ್ವಾದ ನಡೆದಿದೆ.

ಈ ವಿಡಿಯೊ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಘಟನೆ ಕುರಿತು ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ನಿನ್ನಿಂದಾಗಿ ನನ್ನ ಸಹೊದ್ಯೋಗಿ ಅಳುತ್ತಿದ್ದಾಳೆ’ ಎಂದು ಗಗನಸಖಿ ಪ್ರಯಾಣಿಕನಿಗೆ ಹೇಳುತ್ತಿರುವುದು, ‘ನೀನು ಪ್ರಯಾಣಿಕರ ಸೇವಕಿ’ ಎಂದು ಪ್ರಯಾಣಿಕ ಪ್ರತ್ಯುತ್ತರ ನೀಡಿರುವುದು, ‘ನಾನು ಉದ್ಯೋಗಿ ನಿನ್ನ ಸೇವಕಿಯಲ್ಲ’ ಎಂದು ಗಗನಸಖಿ ಮಾರುತ್ತರ ನೀಡಿರುವ ದೃಶ್ಯ ವಿಡಿಯೊದಲ್ಲಿದೆ.

ವಾಗ್ವಾದ ತಾರಕಕ್ಕೇರಿದಾಗ ಪ್ರಯಾಣಿಕನು ಕೋಪದಿಂದ ‘ಏಕೆ ಕಿರುಚುತ್ತಿದ್ದೀಯಾ.. ಬಾಯಿ ಮುಚ್ಚು’ ಎಂದು ಗದರಿರುವುದು ಅದಕ್ಕೆ ಪ್ರತಿಯಾಗಿ ಗಗನಸಖಿಯು ‘ನೀನು ಬಾಯಿ ಮುಚ್ಚು’ ಎಂದು ಹೇಳಿರುವ ದೃಶ್ಯವೂ ವಿಡಿಯೊದಲ್ಲಿ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.