ನವದೆಹಲಿ: ನವದೆಹಲಿಯಿಂದ ಮುಂಬೈಗೆ ಶುಕ್ರವಾರ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ನೀಡಿದ ಸ್ಯಾಂಡ್ವಿಚ್ನಲ್ಲಿ ಹುಳು ಪತ್ತೆಯಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಖುಷ್ಬು ಗುಪ್ತಾ ಎಂಬುವರಿಗೆ ಇಂಡಿಗೊ ಸಿಬ್ಬಂದಿ ನೀಡಿದ ಸ್ಯಾಂಡ್ವಿಚ್ನಲ್ಲಿ ಹುಳು ಇತ್ತು. ಇದನ್ನು ವಿಡಿಯೊ ಚಿತ್ರೀಕರಿಸಿರುವ ಅವರು, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

‘ಹುಳು ಇರುವ ಬಗ್ಗೆ ನಾನು ವಿಮಾನದ ಸಿಬ್ಬಂದಿಯ ಗಮನಕ್ಕೆ ತಂದೆ. ಆದರೂ, ಅವರು ಉಳಿದ ಪ್ರಯಾಣಿಕರಿಗೆ ಸ್ಯಾಂಡ್ವಿಚ್ ನೀಡುವುದನ್ನು ಮುಂದುವರಿಸಿದರು’ ಎಂದು ಅವರು ಹೇಳಿದ್ದಾರೆ.

‘ವಿಮಾನಯಾನ ಸಂಸ್ಥೆಯು ತನ್ನ ಸಿಬ್ಬಂದಿಗೆ ಎಂತಹ ತರಬೇತಿ ನೀಡಿದೆ ಎಂಬುದು ನನಗೆ ಅಚ್ಚರಿ ತಂದಿದೆ. ಇಂತಹ ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾದರೆ ಹೊಣೆ ಯಾರು’ ಎಂದು ಪ್ರಶ್ನಿಸಿದ್ದಾರೆ.

‘ಹುಳು ಇರುವುದು ಗಮನಕ್ಕೆ ಬಂದ ತಕ್ಷಣವೇ ಸಿಬ್ಬಂದಿಯು ಸ್ಯಾಂಡ್ವಿಚ್ ವಿತರಣೆ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಸಂಸ್ಥೆಗೆ ಆಹಾರ ಪೂರೈಸುವವರ ಜೊತೆಗೂ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಹಿಸುತ್ತೇವೆ. ಪ್ರಯಾಣಿಕರಿಗೆ ಆದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದು ಇಂಡಿಗೊ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.