ನವದೆಹಲಿ: ಆಹಾರ, ಇಂಧನ, ಸೇವೆಗಳ ಬೆಲೆಗಳು ಮುಂದಿನ ವರ್ಷ ಏರಿಕೆ ಹಾದಿಯಲ್ಲಿ ಇರಲಿದ್ದು, ಮನೆ ಖರೀದಿ ದುಬಾರಿಯಾಗಿರಲಿದೆ ಎಂದು ಬೆಂಗಳೂರು ಸೇರಿದಂತೆ ದೇಶದ 18 ನಗರಗಳ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿರುವ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಆರು ಸಾವಿರ ಕುಟುಂಬಗಳ ಪೈಕಿ ಶೇ 90ರಷ್ಟು ಕುಟುಂಬಗಳು ಈ ಕಳವಳ ಹಂಚಿಕೊಂಡಿವೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ಮತ್ತಿತರ ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಲೋಕಸಭೆಗೆ ಚುನಾವಣೆ ನಡೆಯಲು ಐದು ತಿಂಗಳಷ್ಟೆ ಬಾಕಿ ಇರುವಾಗ ಈ ಸಮೀಕ್ಷೆ ವಿವರ ಪ್ರಕಟವಾಗಿದೆ. ಉದ್ಯೋಗ ಅವಕಾಶಗಳೂ ಕಡಿಮೆ ಇರಲಿವೆ ಎನ್ನುವುದು ಯುವ ಜನಾಂಗದ ಮುಖ್ಯ ಕಳವಳವಾಗಿದೆ.

ಆಹಾರ ಪದಾರ್ಥಗಳ ಬೆಲೆಗಳು ಏರಿಕೆ ಹಾದಿಯಲ್ಲಿ ಇರಲಿವೆ ಎಂದು ಶೇ 85ಕ್ಕಿಂತ ಹೆಚ್ಚಿನ ಕುಟುಂಬಗಳು ತಿಳಿಸಿವೆ. ಆಹಾರಯೇತರ ಸರಕುಗಳ ಬೆಲೆ ತುಟ್ಟಿಯಾಗಲಿವೆ ಎನ್ನುವುದು ಶೇ 82ರಷ್ಟು ಕುಟುಂಬಗಳ ಆತಂಕವಾಗಿದೆ.

ಮನೆಗಳ ಖರೀದಿಯೂ ತುಟ್ಟಿಯಾಗಲಿದೆ ಎನ್ನುವುದು ಅನೇಕ ಕುಟುಂಬಗಳ ಆತಂಕ. ವಾಸಕ್ಕೆ ಪೂರ್ಣಪ್ರಮಾಣದಲ್ಲಿ ಸನ್ನದ್ಧಗೊಂಡಿರುವ ಫ್ಲ್ಯಾಟ್ ಮತ್ತು ಕಟ್ಟಡಗಳಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಶನಿವಾರ ಪ್ರಕಟಿಸಿರುವುದಕ್ಕೆ ಬಹುಶಃ ಇದೇ ಕಾರಣ ಇರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.