ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟುಕೊಂಡು ಗ್ರಾಮೀಣ ಆರ್ಥಿಕತೆಯ ಸುಧಾರಣೆಗೆ ಒತ್ತು ನೀಡುವ ಸಾಧ್ಯತೆಯಿದೆ.

ದೇಶೀಯ ಬಳಕೆ ಹೆಚ್ಚಳವಾಗಲು ಜನರ ಕೈಯಲ್ಲಿ ಹಣವಿರಬೇಕು. ಅದಕ್ಕೆ ತೆರಿಗೆ ಹೊರೆಯನ್ನು ಕಡಿಮೆ ಮಾಡಬಹುದು ಅಥವಾ ಪ್ರಮಾಣಿತ ತೆರಿಗೆಯಲ್ಲಿ ಕಡಿತ ಮಾಡಬಹುದು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ MGNREGA ಅಡಿಯಲ್ಲಿ ಬಂಡವಾಳ ಹೆಚ್ಚಳ, ರೈತರಿಗೆ ಹೆಚ್ಚಿನ ಪಾವತಿ ಮಾಡುವುದರಿಂದಲೂ ಜನರ ಕೈಯಲ್ಲಿ ಹೆಚ್ಚು ಹಣ ಚಲಾವಣೆಯಾಗುವಂತೆ ಮಾಡಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ಸಾಮಾನ್ಯವಾಗಿ ಚುನಾವಣೆ ಇರುವ ಸಂದರ್ಭಗಳಲ್ಲಿ ಮಧ್ಯಂತರ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಇಂಥಹ ಸಂದರ್ಭದಲ್ಲಿ ಯಾವುದೇ ಹೊಸ ಯೋಜನೆಗಳ ಘೋಷಣೆ, ತೆರಿಗೆಯಲ್ಲಿ ಬದಲಾವಣೆಯನ್ನು ಮಾಡುವುದಿಲ್ಲ.

ಮಧ್ಯಂತರ ಬಜೆಟ್‌ನಲ್ಲಿ, 2024-25ರ ಆರ್ಥಿಕ ವರ್ಷದ 4 ತಿಂಗಳ ಕಾಲ ತನ್ನ ವೆಚ್ಚಗಳನ್ನು ಪೂರೈಸಲು ಸರ್ಕಾರವು ಸಂಸತ್ತಿನ ಅನುಮತಿಯನ್ನು ಪಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.