ಹೈದರಾಬಾದ್: ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರು ತನ್ನ ಪ್ರಮಾಣವಚನ ಸಮಾರಂಭಕ್ಕೆ ಚಂದ್ರಬಾಬುನಾಯ್ಡು ಅವರ ರಾಜಕೀಯ ವಿರೋಧಿ ಎನ್ನಲಾದ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರನ್ನು ಆಹ್ವಾನಿಸಿದ್ದು, ನೆರೆ ರಾಜ್ಯದ ಜತೆಗೆ ಉತ್ತಮ ಬಾಂಧವ್ಯದ ಸೂಚನೆ ನೀಡಿದ್ದಾರೆ.

ವೈಎಸ್ಆರ್ಸಿ ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ನಂತರ ಕೆಸಿಆರ್ ಮನೆಗೆ ತೆರಳಿ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದರು. ಭಾನುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನುಜಗನ್ ಭೇಟಿಮಾಡಲಿದ್ದಾರೆ.

‘ಜಗನ್ ಅವರು ಕೊಡು–ಕೊಳ್ಳುವ ಮನೋಭಾವದ ವ್ಯಕ್ತಿ. ಕೇಂದ್ರ ಸರ್ಕಾರ ಮತ್ತು ನೆರೆ ರಾಜ್ಯಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಬಯಸಿದ್ದಾರೆ’ ಎಂದು ವೈಎಸ್ಆರ್ಸಿ ಹಿರಿಯ ನಾಯಕ ಉಮ್ಮಾರೆಡ್ಡಿ ವೆಂಕಟೇಶ್ವರಲು ಹೇಳಿದ್ದಾರೆ.

ಇದಕ್ಕೂ ಮುನ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು, ನಮ್ಮ ಮೇಲೆ ವಿಶ್ವಾಸವಿಟ್ಟು ಜನ ಬೆಂಬಲಿಸಿದ್ದಾರೆ.2024ರಲ್ಲಿ ನಮ್ಮ ಸಾಧನೆಗಳಿಂದ ಇನ್ನೂ ಹೆಚ್ಚಿನ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡ
ಬೇಕು ಎಂದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭ 30ರಂದು ವಿಜಯವಾಡದಲ್ಲಿ ನಡೆಯಲಿದೆ.

‘ಅಮರಾವತಿ ಆದ್ಯತೆ ಅಲ್ಲ’

ಅಮರಾವತಿ: ‘ಆಂಧ್ರಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ರೂಪಿಸಿರುವ ಒಂಬತ್ತು ಅಂಶಗಳ ‘ನವರತ್ನ’ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದೇ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ವೈ.ಎಸ್. ಜಗನ್ಮೋಹನ್ ರೆಡ್ಡಿ ಆದ್ಯತೆಯಾಗಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.