ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು (ಭಾನುವಾರ) ಚುನಾವಣೆ ಪ್ರಚಾರದ ವೇಳೆ ಅಸ್ವಸ್ಥರಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಗ್ಯವಾಗಿದ್ದಾರೆ ಎಂದು ಪುತ್ರ, ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮಾಹಿತಿ ನೀಡಿರುವ ಪ್ರಿಯಾಂಕ್ ಖರ್ಗೆ, 'ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಖರ್ಗೆ ಸ್ವಲ್ಪ ಅಸ್ವಸ್ಥರಾಗಿದ್ದರು' ಎಂದು ತಿಳಿಸಿದ್ದಾರೆ.

'ವೈದ್ಯಕೀಯ ತಂಡವು ಖರ್ಗೆ ಅವರನ್ನು ಪರೀಕ್ಷಿಸಿದ್ದು, ರಕ್ತದೊತ್ತಡ ಅಲ್ಪ ಕಡಿಮೆಯಾಗಿರುವುದನ್ನು ಹೊರತುಪಡಿಸಿದರೆ ಅವರು ಆರೋಗ್ಯಕರವಾಗಿದ್ದಾರೆ. ನಿಮ್ಮೆಲ್ಲರ ಕಾಳಜಿಗೆ ಕೃತಜ್ಞನಾಗಿದ್ದೇನೆ' ಎಂದು ಹೇಳಿದ್ದಾರೆ.

'ದೃಢ ಸಂಕಲ್ಪ, ಹಿತೈಶಿಗಳ ಶುಭ ಹಾರೈಕೆಯಿಂದ ಮತ್ತಷ್ಟು ಪ್ರಬಲರಾಗಿ ಅವರು ಮುಂದುವರಿಯಲಿದ್ದಾರೆ' ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
.J & K Polls | ಭಾಷಣದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸ್ವಸ್ಥ.ಪ್ರಿಯಾಂಕ್ ಖರ್ಗೆ ಬರಹ: ಬೆಕ್ಕು ಕಣ್ ಮುಚ್ಚಿ ಬಿಟ್ ಬೈ ಬಿಟ್ ಹಾಲು ಕುಡಿದಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.