ಪಟ್ನಾ: ಬಿಹಾರ ವಿಧಾನಸಭೆಯಲ್ಲಿ ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ ಎಂದು ಜೆಡಿಯು ಮುಖ್ಯ ಸಚೇತಕ ಶ್ರವಣ್ ಕುಮಾರ್ ಶನಿವಾರ ತಿಳಿಸಿದರು.

ತಮ್ಮ ನಿವಾಸದಲ್ಲಿ ಪಕ್ಷದ ಶಾಸಕರಿಗೆ ಹಮ್ಮಿಕೊಂಡಿದ್ದ ಭೋಜನಕೂಟದ ಬಳಿಕ ಮಾತನಾಡಿದ ಅವರು, ವಿಪ್ ಉಲ್ಲಂಘಿಸುವ ಶಾಸಕರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದೂ ಹೇಳಿದರು.

‘ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವಾಗ ಹಾಜರಿದ್ದು, ಎನ್ಡಿಎ ಮೈತ್ರಿಕೂಟ ಸರ್ಕಾರದ ಪರವಾಗಿ ಮತ ಚಲಾಯಿಸಬೇಕು ಎಂದು ವಿಪ್ನಲ್ಲಿ ಸೂಚಿಸಲಾಗಿದೆ’ ಎಂದು ಅವರು ವಿವರಿಸಿದರು.

ಭೋಜನಕೂಟದಲ್ಲಿ ಕೆಲವೇ ಶಾಸಕರು ಪಾಲ್ಗೊಂಡಿದ್ದನ್ನು ಗಮನಿಸಿ ಮುಖ್ಯಮಂತ್ರಿ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿ, ಶೀಘ್ರ ನಿರ್ಗಮಿಸಿದ್ದಾರೆ ಎಂಬುದು ಕೇವಲ ವದಂತಿ ಎಂದು ಶ್ರವಣ್ ಕುಮಾರ್ ಹೇಳಿದರು.

ನಿತೀಶ್ ಅವರು ಬೇರೆ ಕಾರ್ಯಕ್ರಮಕ್ಕೆ ತೆರಳಬೇಕಿದ್ದ ಕಾರಣ ಭೋಜನಕೂಟದಿಂದ ಶೀಘ್ರ ನಿರ್ಗಮಿಸಿದರು. ಪಕ್ಷದ ಕೆಲವು ಶಾಸಕರು ಅನಾರೋಗ್ಯದ ಕಾರಣ ಪಾಲ್ಗೊಂಡಿಲ್ಲ ಎಂದಿದ್ದಾರೆ.

‘ಮಹಾಘಟಬಂಧನ’ದ ಅಂಗವಾಗಿರುವ ಸಿಪಿಐ(ಎಂಎಲ್) ಮುಖಂಡ ಮಹಬೂಬ್ ಆಲಂ ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರನ್ನು ಭೇಟಿಯಾಗಿರುವುದಾಗಿಯೂ ಅವರು ತಿಳಿಸಿದರು.

‘ಎನ್ಡಿಎ ಮೈತ್ರಿಕೂಟವು ತನ್ನ ಶಾಸಕರಿಗೆ ಅವರ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಲು ಅನುಮತಿ ನೀಡಿದರೆ ಸರ್ಕಾರವು ಪತನವಾಗಲಿದೆ’ ಎಂದು ಆರ್ಜೆಡಿ ವಕ್ತಾರ ಅಖ್ತರುಲ್ ಇಮಾನ್ ಶಾಹಿನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.