ನವದೆಹಲಿ: ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ವಿರುದ್ಧ ಸ್ಪರ್ಧಿಸುತ್ತಿರುವ ಎಎಪಿ ಅಭ್ಯರ್ಥಿ ಆತಿಶಿ ಪರವಾಗಿ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಪ್ರಚಾರ ನಡೆಸಲಿದ್ದಾರೆ.

ಇವರಲ್ಲದೆ, ಗೋರಖ್ಪುರದ ಬಿಆರ್ಡಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದ 63 ಮಕ್ಕಳ ಸಾವಿನ ಘಟನೆಯ ಬಳಿಕ ಅಮಾನತುಗೊಂಡಿದ್ದ ಕಫೀಲ್ ಖಾನ್ ಅವರೂ ಎಎಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.

‘ಕಫೀಲ್ ಖಾನ್ ತಮ್ಮ ಸ್ವಂತ ಹಣದಿಂದ ಬಿಆರ್ಡಿ ಆಸ್ಪತ್ರೆಯ ಮಕ್ಕಳ ವಾರ್ಡ್ಗೆ ಆಮ್ಲಜನಕ ಸಿಲಿಂಡರ್ ಒದಗಿಸುತ್ತಿದ್ದರು. ಅವರು ರಜೆ ಇದ್ದ ದಿನ ಸಿಲಿಂಡರ್ ಖಾಲಿಯಾಗಿ ಮಕ್ಕಳು ಸಾವನ್ನಪ್ಪುವಂತಾಗಿತ್ತು. ಅವರು ಒಬ್ಬ ಹೀರೊ’ ಎಂದು ಎಎಪಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.