ನವದೆಹಲಿ:ದೆಹಲಿಯ ಮಂಡಿ ಹೌಸ್‌ನಿಂದ ಆರಂಭಿಸಿ ರಾಷ್ಟ್ರಪತಿ ಭವನವರೆಗೆಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಜೆಎನ್‌ಯು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನಾಮೆರವಣಿಗೆ ರಾಷ್ಟ್ರಪತಿ ಭವನದತ್ತ ಸಾಗುತ್ತಿದ್ದಂತೆ ದಾರಿ ಮಧ್ಯೆ ದೆಹಲಿ ಪೊಲೀಸರು ತಡೆಯೊಡ್ಡಿದ್ದಾರೆ. ಪೊಲೀಸರ ಬ್ಯಾರಿಕೇಡ್‌ಗಳ ಮುಂದೆ ಘೋಷಣೆ ಕೂಗಿದ ವಿದ್ಯಾರ್ಥಿಗಳು ಬ್ಯಾರಿಕೇಡ್ ಮುರಿದು ಮುಂದೆ ಹೋಗಲು ಯತ್ನಿಸಿದ್ದಾರೆ. ಈ ಹೊತ್ತಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾಮಾಜಿಕ ಸಂಸ್ಥೆಗಳ ಸದಸ್ಯರುಗುರುವಾರ ಮಧ್ಯಾಹ್ನ ಮಂಡಿ ಹೌಸ್‌ನಿಂದ ಈ ಪ್ರತಿಭಟನೆ ಆರಂಭಿಸಿದ್ದರು. ಜನವರಿ 5 ಭಾನುವಾರದಂದು ಜೆಎನ್‌ಯುನಲ್ಲಿ ಮುಸುಕುಧಾರಿಗಳಿಂದ ನಡೆದ ದಾಂದಲೆ ಖಂಡಿಸಿ ಮತ್ತು ಜೆಎನ್‌ಯು ಉಪಕುಲಪತಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮಾನವ ಸಂಪನ್ಮೂಲ ಇಲಾಖೆ ಸಚಿವಾಲಯಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಈ ಮೆರವಣಿಗೆ ಕೈಗೊಳ್ಳಲಾಗಿತ್ತು.

ಆದರೆ ಜೆಎನ್‌ಯು ವಿದ್ಯಾರ್ಥಿ ಸಂಘಗಳ ಅಧ್ಯಕ್ಷೆ ಆಯಿಷಿ ಘೋಷ್ ನಿರ್ಧಾರದಂತೆ ರಾಷ್ಟ್ರಪತಿ ಭವನಕ್ಕೆ ಹೋಗಿ ರಾಷ್ಟ್ರಪತಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿಈಯೋಜನೆಯನ್ನುಬದಲಾಯಿಸಲಾಯಿತು. ಈ ಮೆರವಣಿಗೆಯಲ್ಲಿ ಸಿಪಿಐ (ಎಂ) ಪಕ್ಷದಹಿರಿಯ ನೇತಾರ ಸೀತಾರಾಂ ಯೆಚೂರಿ ಕೂಡಾ ಭಾಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.