ತಿರುವನಂತಪುರ: ವಯನಾಡ್ ಭೂಕುಸಿತದ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 221ಕ್ಕೆ ಏರಿದ್ದು, ಇನ್ನೂ ಸುಮಾರು 180 ಮಂದಿ ನಾಪತ್ತೆಯಾಗಿದ್ದಾರೆ.

ಇದುವರೆಗೆ 171 ಶವಗಳ ಗುರುತು ಪತ್ತೆಯಾಗಿದೆ. ಉಳಿದ ಮೃತರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ನಡೆಸುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ.

ಮೃತರಲ್ಲಿ 37 ಮಕ್ಕಳು, 87 ಮಂದಿ ಮಹಿಳೆಯರು ಸೇರಿದ್ದಾರೆ. ಚಾಲಿಯಾರ್ ನದಿಯಲ್ಲಿ 166 ಅಂಗಾಂಗಗಳು ಸಿಕ್ಕಿವೆ. ಅನಧಿಕೃತವಾಗಿ ಮೃತರ ಸಂಖ್ಯೆ 375ಕ್ಕೆ ಏರಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾದವರ ಪತ್ತೆಗೆ ಭಾನುವರವೂ ಚಾಲಿಯಾರ್ ನದಿಯ 40 ಕಿ.ಮೀ. ವ್ಯಾಪ್ತಿ ಹಾಗೂ ಭೂಕುಸಿತದ ಪ್ರದೇಶದಲ್ಲಿ ತೀವ್ರ ಶೋಧ ನಡೆದಿದ್ದು, ಎರಡು ಶವ ಮತ್ತು 9 ಅಂಗಾಂಗಗಳು ಪತ್ತೆಯಾದವು.

ರಕ್ಷಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಯೊಬ್ಬರು, ‘ನದಿಯಲ್ಲಿ ಕೊಚ್ಚಿಹೋಗಿರುವವರು ವನ್ಯಜೀವಿಗಳಿಗೆ ಸಿಕ್ಕಿರುವ ಸಾಧ್ಯತೆ ತಳ್ಳಿಹಾಕಲಾಗದು. ಆದರೆ, ಈ ವಲಯದಲ್ಲಿ ಮನುಷ್ಯನನ್ನು ತಿನ್ನಬಹುದಾದ ವನ್ಯಜೀವಿಗಳು ಕಡಿಮೆ’ ಎಂದು ಹೇಳಿದರು.

ನದಿಯಲ್ಲಿ ಅಲ್ಲದೆ, ಸೂಚಿಪರ ಜಲಪಾತದ ಬಳಿಯೂ ಶೋಧ ಕಾರ್ಯ ನಡೆದಿದೆ. 2019ರಲ್ಲಿ ಪುತ್ತುಮಲ ಬಳಿ ಸಂಭವಿಸಿದ್ದ ಭೂಕುಸಿತದ ವೇಳೆ ಈ ಜಲಪಾತದಲ್ಲಿ ಅನೇಕ ಶವಗಳು ಪತ್ತೆಯಾಗಿದ್ದವು. ಆಗ ನಾಪತ್ತೆಯಾದವರ ಐವರ ಶವಗಳು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪಡಿತರ ಚೀಟಿ ಆಧರಿಸಿ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದು ನಾಪತ್ತೆಯಾದವರ ಮಾಹಿತಿ ಕ್ರೋಡೀಕರಿಸುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಭೂಕುಸಿತ ನಡೆದ ಪ್ರದೇಶದಲ್ಲಿ 1,721 ಕುಟುಂಬಗಳಿದ್ದು, 4,833 ಜನರಿದ್ದರು.

ತೀವ್ರ ಶೋಧ ಕಾರ್ಯದ ನಂತರವೂ ಶವಗಳು ಪತ್ತೆಯಾಗದೇ ಇದ್ದರೆ, ಸರ್ಕಾರ ತನ್ನ ವಿಶೇಷಾಧಿಕಾರವನ್ನು ಬಳಸಿ ನಾಪತ್ತೆ ಆದವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ದುರಂತದಲ್ಲಿ ಮೃತಪಟ್ಟವರ ಶವಗಳ ಸಾಮೂಹಿಕ ಅಂತ್ಯಕ್ರಿಯೆ ಕಾರ್ಯವನ್ನು ಪುತ್ತುಮಲದಲ್ಲಿ ಗುರುತಿಸಲಾದ ಭೂಮಿಯಲ್ಲಿ, ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.