ಪ್ರಯಾಗರಾಜ್: ಮಥುರಾದಲ್ಲಿನ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರದೇಶವು ವಕ್ಫ್ ಆಸ್ತಿಗೆ ಸಂಬಂಧಿಸಿದೆ ಎಂದು ಮುಸ್ಲಿಂ ಸಮುದಾಯದವರು ಮಂಡಿಸಿದ್ದ ವಾದವನ್ನು ಹಿಂದೂಗಳ ಪರ ವಕೀಲರು ಸೋಮವಾರ ಅಲ್ಲಗಳೆದರು.

‘ವಿವಾದಿತ ಆಸ್ತಿಯು ಹಿಂದೆ ದೇವಸ್ಥಾನವಾಗಿತ್ತು. ಅದನ್ನು ಬಲವಂತದಿಂದ ಸ್ವಾಧೀನಕ್ಕೆ ಪಡೆದ ನಂತರ ಅವರು ನಮಾಜ್ ಮಾಡಲು ಆರಂಭಿಸಿದರು. ಆದರೆ, ಹೀಗೆ ಮಾಡುವುದರಿಂದ ಈ ಸ್ಥಳದ ಸ್ವರೂಪವನ್ನು ಬದಲಿಸಲು ಆಗುವುದಿಲ್ಲ’ ಎಂದು ಹಿಂದೂಗಳ ಪರ ವಕೀಲರು ಅಲಹಾಬಾದ್ ಹೈಕೋರ್ಟ್‌ನಲ್ಲಿ ವಾದಿಸಿದರು. ಆ ಜಾಗವು ವಕ್ಫ್ ಆಸ್ತಿ ಆಗಿರಲಿಲ್ಲ, ಹೀಗಾಗಿ ವಕ್ಫ್ ಕಾಯ್ದೆಯು ಅದಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿದರು.

ಇದು ವಕ್ಫ್ ಆಸ್ತಿ ಅಲ್ಲದಿರುವ ಕಾರಣ, ಇದರ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಅವರು ವಾದಿಸಿದರು. ‘ವಿವಾದಿತ ಶಾಹಿ ಈದ್ಗಾ ಮಸೀದಿಯು ವಕ್ಫ್ ಆಸ್ತಿಯಾಗಿರುವ ಕಾರಣ, ವಕ್ಫ್ ನ್ಯಾಯಮಂಡಳಿ ಮಾತ್ರವೇ ಇದಕ್ಕೆ ಸಂಬಂಧಿಸಿದ ತಕರಾರುಗಳನ್ನು ಆಲಿಸಬಹುದು’ ಎಂದು ಮುಸ್ಲಿಮರ ಪರ ವಕೀಲರು ವಾದಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರು ವಿಚಾರಣೆಯನ್ನು ಏಪ್ರಿಲ್ 30ಕ್ಕೆ ನಿಗದಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.